ಬೆಳಗಾವಿಯಲ್ಲಿ ಯುವಕನ ಹತ್ಯೆ ಪ್ರಕರಣ – ಹತ್ತು ಆರೋಪಿಗಳ ಬಂಧನ…

80
firstsuddi

ಬೆಳಗಾವಿ : ಸೆ.28 ರಂದು ಜಿಲ್ಲೆಯ ಖಾನಾಪುರ ಹೊರವಲಯದಲ್ಲಿ ನಡೆದಿದ್ದ ಅರ್ಬಾಜ್ ಮುಲ್ಲಾ ಎಂಬ ಯುವಕನ ಕೊಲೆ ಪ್ರಕರಣ ಸಂಬಂಧ ಹತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ತಂದೆ ಈರಪ್ಪ ಕಂಬಾರ, ತಾಯಿ ಸುಶೀಲಾ ಕಂಬಾರ, ಶ್ರೀರಾಮಸೇನಾ ಹಿಂದೂಸ್ತಾನ್ ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಅಲಿಯಾಸ್ ಮಹಾರಾಜ ಮುತಗೇಕರ್, ಕುತಬುದ್ದೀನ್ ಬೇಪಾರಿ, ಪ್ರಲ್ಹಾದ್ ಸುಗತೆ, ಗಣಪತಿ ಸುಗತೆ, ಮಂಜುನಾಥ ಗೋಂದಳಿ, ಪ್ರಶಾಂತ ಪಾಟೀಲ್, ಪ್ರವೀಣ್ ಪೂಜೇರಿ, ಶ್ರೀಧರ್ ಡೋಣಿ ಸೇರಿ ಒಟ್ಟು 10 ಆರೋಪಿಗಳನ್ನ ಬಂಧಿಸಲಾಗಿದೆ. ಅರ್ಬಾಜ್ ಮುಲ್ಲಾನನ್ನು ಸೆಪ್ಟೆಂಬರ್ 28ರಂದು ಬರ್ಬರವಾಗಿ ಕೊಲೆಗೈದು ರೈಲ್ವೆ ಹಳಿ ಮೇಲೆ ಬಿಸಾಕಿ ಹೋಗಲಾಗಿತ್ತು.

ಕಳೆದ 4 ನಾಲ್ಕು ವರ್ಷಗಳಿಂದ ಈರಪ್ಪ-ಸುಶೀಲಾ ದಂಪತಿಯ ಹಿರಿಯ ಪುತ್ರಿ ಹಾಗೂ ಅರ್ಬಾಜ್ ಪ್ರೀತಿಸುತ್ತಿದ್ದರು. ಇವರ ಲವ್ ಕಹಾನಿ ಯುವತಿಯ ಕುಟುಂಬಕ್ಕೆ ಗೊತ್ತಾದ ಮೇಲೆ ಅರ್ಬಾಜ್ ಮುಲ್ಲಾ ಕೊಲೆಗೆ ಶ್ರೀ ರಾಮಸೇನೆ ಹಿಂದೂಸ್ತಾನ್ ಸಂಘಟನೆ ತಾಲೂಕು ಅಧ್ಯಕ್ಷ ಪುಂಡಲೀಕ್ ಮುತಗೇಕರಗೆ ಯುವತಿಯ ತಂದೆ-ತಾಯಿ ಸುಪಾರಿ ನೀಡಿದರು.

ಸೆ. 28ರಂದು ಅರ್ಬಾಜ್ ನಿಗೂಢ ಸಾವು ಪ್ರಕರಣ ಸಂಬಂಧ ಆತನ ತಾಯಿ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸರಿಗೆ ಪ್ರಕರಣ ವರ್ಗಾವಣೆಯಾಗಿತ್ತು. ಪ್ರಕರಣದ ಗಂಭೀರತೆ ಅರಿತ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಆರೋಪಿಗಳ ಪತ್ತೆಗೆ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.