ಬೈಕ್ ಸವಾರನ ಮೇಲೆ ಮರ ಬಿದ್ದು ಸಾವು 

62
ಹಾಸನ :  ಬೈಕ್ ಸವಾರನ ಮೇಲೆ ಮರ ಬಿದ್ದು ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ರಸ್ತೆಯ ಮೊಳೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟಿರುವ ವ್ಯಕ್ತಿ ಕಲ್ಲಸೋಮನಹಳ್ಳಿ ಗ್ರಾಮದ ರಂಗಶೆಟ್ಟಿ (45)ಎಂದು ಗುರುತಿಸಲಾಗಿದೆ.
ಚನ್ನರಾಯಪಟ್ಟಣದಿಂದ ಬೈಕಿನಲ್ಲಿ  ಕಲ್ಲ ಸೋಮನಹಳ್ಳಿಯ ತನ್ನ ಮನೆಗೆ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಬೃಹತ್ ಮರವೊಂದು ಚಲಿಸುತ್ತಿದ್ದ ಬೈಕಿನ ಮೇಲೆ ಬಿದ್ದಿದ್ದು.ಬೈಕ್ ಹಾಗೂ ಮರದ ಮಧ್ಯೆ ಸಿಲುಕಿದ ರಂಗಶೆಟ್ಟಿ ಅರ್ಧಗಂಟೆಗೂ ಹೆಚ್ಚು ಕಾಲ ನರಳಾಡಿ ರಕ್ಷಿಸುವಂತೆ ಅಂಗಲಾಚಿದ್ದಾರೆ.
ದೊಡ್ಡ ಗಾತ್ರದ ಮರ ಆಗಿದ್ದರಿಂದ ಸ್ಥಳೀಯರು ರಕ್ಷಿಸಲು ಹರಸಾಹಸಪಟ್ಟರು ಸಾಧ್ಯವಾಗದೆ ಜೆಸಿಬಿ ತರಿಸಿ ಮರವನ್ನು ಎತ್ತಿ ರಂಗ ಶೆಟ್ಟಿ ಅವರನ್ನು ಹೊರಕ್ಕೆಳೆದು.ಸ್ಥಳಕ್ಕೆ ಆಗಮಿಸಿದ  ಸ್ಥಳೀಯ ಆಸ್ಪತ್ರೆ ಸಿಬ್ಬಂದಿಗಳು   ಚಿಕಿತ್ಸೆ ನೀಡಿದರು ಚಿಕಿತ್ಸೆ  ಫಲಕಾರಿಯಾಗದೆ  ಸಾವನ್ನಪ್ಪಿದ್ದಾರೆನ್ನಲಾಗಿದ್ದು. ಚನ್ನರಾಯಪಟ್ಟಣ  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .