ಕಾಮನ್‍ವೆಲ್ತ್ ಗೇಮ್ಸ್ : ಅವಿನಾಶ್ ಸಬ್ಲೆ, ಪ್ರಿಯಾಂಕಾ ಗೋಸ್ವಾಮಿಗೆ ಬೆಳ್ಳಿ ಪದಕ …

43

ಲಂಡನ್: ಬರ್ಮಿಂಗ್ ಹ್ಯಾಮ್‍ ನಲ್ಲಿ ನಡೆಯುತ್ತಿರುವ ಕಾಮನ್‍ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 9ನೇ ದಿನವೂ ಪದಕ ಬೇಟೆ ಮುಂದುವರಿಸಿದೆ. 3,000 ಮೀ. ವಿಭಾಗದ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಅವಿನಾಶ್ ಸಬ್ಲೆ 8:11:20 ನಿಮಿಷಗಳಲ್ಲಿ ಗುರಿ ಮುಟ್ಟಿ ಬೆಳ್ಳಿಗೆ ಕೊರಳೊಡ್ಡಿದ್ದಾರೆ. ಇತ್ತ ಮಹಿಳೆಯರ 10,000 ಮೀಟರ್ ನಡಿಗೆಯನ್ನು ಪ್ರಿಯಾಂಕಾ ಗೋಸ್ವಾಮಿ ಕೇವಲ 49 ನಿಮಿಷ, 38 ಸೆಕೆಂಡ್​​​ ಗಳಲ್ಲಿ ಪೂರ್ಣಗೊಳಿಸುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಕಾಮನ್​ ವೆಲ್ತ್ ಗೇಮ್ಸ್​​ ನಲ್ಲಿ ಭಾರತ ಇಲ್ಲಿಯವರೆಗೆ 9 ಚಿನ್ನ, 10 ಬೆಳ್ಳಿ ಹಾಗೂ 9 ಕಂಚಿನ ಸಾಧನೆ ಮಾಡಿದ್ದು, ಒಟ್ಟು 28 ಪದಕ ಮುಡಿಗೇರಿಸಿಕೊಂಡು 5ನೇ ಸ್ಥಾನದಲ್ಲಿದೆ