ಭಾರತದ 10 ಶ್ರೀಮಂತರ ಪಟ್ಟಿ ರಿಲೀಸ್ ಮಾಡಿದ ಫೋರ್ಬ್ಸ್ : ನಂ.1 ಶ್ರೀಮಂತ ಮುಕೇಶ್ ಅಂಬಾನಿ..!

176
firstsuddi

ನವದೆಹಲಿ : ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರು ಮೊದಲ ಸ್ಥಾನವನ್ನು ಪಡೆದಿದ್ದಾರೆ. ಅದಾನಿ ಗ್ರೂಪ್ನ ಚೇರ್ಮ್ಯಾನ್ ಗೌತಮ್ ಅದಾನಿಯವರು ಎರಡನೇ ಸ್ಥಾನದಲ್ಲಿದ್ದಾರೆ.

ಫೋರ್ಬ್ಸ್ ಪತ್ರಿಕೆ 2021ರ 10 ಜನ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 84.5 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿಯವರು ಮೊದಲ ಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿ ಇಡೀ ಏಷ್ಯಾದಲ್ಲೇ ನಂ.1 ಶ್ರೀಮಂತರಾಗಿದ್ದು, ತೈಲೋದ್ಯಮದಿಂದ-ಟೆಲಿಕಾಂ ಕ್ಷೇತ್ರದವರೆಗೆ ಅವರ ಗಳಿಕೆ ಇದ್ದು, ಈ ಹಿನ್ನೆಲೆ ಅವರು ಅನೇಕ ವರ್ಷಗಳಿಂದಲೂ ಶ್ರೀಮಂತರ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅದಾನಿಯವರ ಆಸ್ತಿ ಮೌಲ್ಯ 50.5 ಬಿಲಿಯನ್ ಡಾಲರ್. ಮೂರನೇ ಸ್ಥಾನದಲ್ಲಿ ಎಚ್ಸಿಎಲ್ ಸಂಸ್ಥಾಪಕ ಶಿವ ನಾಡರ್ ಇದ್ದು, ನಾಲ್ಕನೇ ಸ್ಥಾನದಲ್ಲಿ ಡಿ-ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣನ್ ದಮಾನಿ ಇದ್ದಾರೆ. ಈ ಹಿಂದೆ ದಮಾನಿ ಅವರು 2ನೇ ಸ್ಥಾನದಲ್ಲಿದ್ದರು.

ಫೋರ್ಬ್ಸ್ ಪಟ್ಟಿ ಮಾಡಿರುವ ಭಾರತದ 10 ಜನ ಶ್ರೀಮಂತರ ಹೆಸರು ಮತ್ತು ಆಸ್ತಿ ಮೌಲ್ಯ ಇಂತಿದೆ:
• ಮುಕೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ): 84.5 ಬಿಲಿಯನ್ ಡಾಲರ್
• ಗೌತಮ್ ಅದಾನಿ (ಅದಾನಿ ಗ್ರೂಪ್ ಚೇರ್ಮ್ಯಾನ್): 50.5 ಬಿಲಿಯನ್ ಡಾಲರ್
• ಶಿವ ನಾಡರ್ (ಎಚ್ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕ): 23.5 ಬಿಲಿಯನ್ ಡಾಲರ್
• ರಾಧಾಕೃಷ್ಣನ್ ದಮಾನಿ (ಡಿ-ಮಾರ್ಟ್ ಸಂಸ್ಥಾಪಕ): 16.5 ಬಿಲಿಯನ್ ಡಾಲರ್
• ಉದಯ್ ಕೋಟಾಕ್ (ಕೋಟಾಕ್ ಮಹೀಂದ್ರಾ ಕಾರ್ಯನಿರ್ವಾಹಕ ಉಪಾಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ): 15.9 ಬಿಲಿಯನ್      ಡಾಲರ್
• ಲಕ್ಷ್ಮೀ ಮಿತ್ತಲ್ (ಆರ್ಸೆಲರ್ ಮಿತ್ತಲ್ ಅಧ್ಯಕ್ಷ, ಸಿಇಒ): 14.9 ಬಿಲಿಯನ್ ಡಾಲರ್
• ಕುಮಾರ್ ಬಿರ್ಲಾ (ಆದಿತ್ಯ ಬಿರ್ಲಾ ಚೇರ್ಮೆನ್): 12.8 ಬಿಲಿಯನ್ ಡಾಲರ್
• ಸೈರಸ್ ಪೂನವಾಲಾ (ಪೂನಾವಾಲಾ ಗ್ರೂಪ್ ಅಧ್ಯಕ್ಷ): 12.7 ಬಿಲಿಯನ್ ಡಾಲರ್