ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗದರ ಹೊರವಲಯದಲ್ಲಿ ಸಂಭವಿಸಿದೆ
ಮೃತಪಟ್ಟ ಯುವಕರನ್ನು ನಗದರ ಚವ್ಹಾಟ ಗಲ್ಲಿಯ ಶ್ರೀನಾಥ್ ಡಿ.ಪವಾರ, ಸದಾಶಿವ ನಗರದ ನಿವಾಸಿ ರುಚಿತ ಆರ್.ಧುಮಾವತ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಯುವಕರು ಪಾರ್ಟಿ ಮಾಡಲೆಂದು ಕಾಕತಿ ಬಳಿಯ ಢಾಬಾಗೆ ತೆರಳಿದ್ದರು. ಪಾರ್ಟಿ ಮುಗಿಸಿ ಪುಣೆ-ಬೆಂಗಳೂರು ಹೆದ್ದಾರಿ ಮಾರ್ಗವಾಗಿ ನಗರಕ್ಕೆ ಬೈಕ್ ನಲ್ಲಿ ಬರುತ್ತಿದ್ದರು. ಆಗ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟ ಇಬ್ಬರೂ ಲಿಂಗರಾಜ್ ಕಾಲೇಜಿನಲ್ಲಿ ಬಿ.ಕಾಂ ಪದವಿಯ ಕೊನೆಯ ವರ್ಷದ ವಿದ್ಯಾರ್ಥಿಗಳು ಎಂಬ ಮಾಹಿತಿ ತಿಳಿದುಬಂದಿದೆ. ನಗರದ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










