ಮಂಗಳೂರು ಗಲಭೆ- ದೇಶದ ಗೃಹ ಸಚಿವರಾಗಿ ಇದರ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ನಿಮಗೆ ಅನಿಸೋದಿಲ್ಲವೇ?-ಸಿದ್ದರಾಮಯ್ಯ ಪ್ರಶ್ನೆ…

160
firstsuddi

ಬೆಂಗಳೂರು : ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಮಂಗಳೂರು ಹಿಂಸಾಚಾರದ ವೇಳೆ ಇಬ್ಬರು ಅಮಾಯಕರು ಪೊಲೀಸರ ನಕಲಿ ಎನ್‍ಕೌಂಟರ್‍ಗೆ ಬಲಿಯಾಗಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದ ಗೃಹ ಸಚಿವರಾಗಿ ಇದರ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ನಿಮಗೆ ಅನಿಸೋದಿಲ್ಲವೇ? ಇದು ಸಾರ್ವಜನಿಕರ ಕೂಗಾಗಿದೆ.
ಮಿಸ್ಟರ್ ಅಮಿತ್ ಶಾ, ಸಿಎಂ ಯಡಿಯೂರಪ್ಪ ಅವರು ಪ್ರವಾಹದ ನಷ್ಟಕ್ಕೆ 35 ಸಾವಿರ ಕೋಟಿ ಹಣವನ್ನು ಕೇಳಿದರೆ ನೀವು 1,870 ಕೋಟಿ ಹಣ ಕೊಟ್ಟಿದ್ದೀರಿ. ಉಳಿದ ಬಾಕಿ ಹಣ ಯಾವಾಗ ಕೊಡುತ್ತೀರಿ? ನೀವು ಜನರ ನಡುವೆ ವಿಭಜನೆ ಆಗುವಂತ ಯೋಜನೆ ಜಾರಿಗೆ ತಂದಿದ್ದೀರಿ, ಇದರಲ್ಲಿ ಜನರ ಬ್ರೇನ್ ವಾಷ್ ಮಾಡೋ ಮೊದಲು ಪ್ರವಾಹ ಪೀಡಿತ ಸ್ಥಳಗಳಿಗೆ ಯಾಕೆ ಭೇಟಿ ಕೊಟ್ಟು ಕೇಂದ್ರ ನೀಡಿದ ಪರಿಹಾರದ ಬಗ್ಗೆ ಮರು ಪರಿಶೀಲನೆ ಮಾಡಬಾರದು? ಸಿಎಎ, ಎನ್​​ಆರ್​​ಸಿ ಜಾರಿಗೆ ತಂದ ಬಳಿಕ ಸರ್ಕಾರದಲ್ಲಿ ಹಣ ಉಳಿದಿರುತ್ತ?
ಮಿಸ್ಟರ್ ಅಮಿತ್ ಶಾ, ಮಹದಾಯಿ ವಿಚಾರದಲ್ಲಿ ನಿಮ್ಮ ಸಹೋದ್ಯೋಗಿಗಳು ವ್ಯತಿರಿಕ್ತವಾದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ನಿಮ್ಮ ನಿಲುವು ಯಾಕೆ ಬದಲಾಯಿತು..? ಈ ವಿಚಾರದಲ್ಲಿ ನಿಮ್ಮ ನಿಲುವೇನು?
“ಗೃಹ ಸಚಿವ ಅಮಿತ್ ಶಾ ಅವರೇ, ಸಿಎಎ,ಎನ್​​ಆರ್​​ಸಿ  ಮೂಲಕ ದೇಶ ಒಡೆಯುವ ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ, ನೆರೆಹಾವಳಿಯಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರ ಕಡೆ ಗಮನ ಕೊಡಿ.
ನೆರೆ ಹಾವಳಿ ನಷ್ಟಕ್ಕೆ ಪರಿಹಾರ ಕೇಳಿರುವುದು ರೂ.35 ಸಾವಿರ ಕೋಟಿ, ಕೇಂದ್ರ ಸರ್ಕಾರ ನೀಡಿರುವುದು ರೂ.1800 ಕೋಟಿ. ಮೊದಲು ಬಾಕಿ ನೆರೆಪರಿಹಾರ ಪಾವತಿ ನಂತರ ಸಿಎಎ, ಎನ್​​ಆರ್​​ಸಿ . ಗೃಹ ಸಚಿವ ಅಮಿತ್ ಶಾ ಅವರೇ, ಕಳಸಾ-ಬಂಡೂರಿ ಯೋಜನೆ ಬಗ್ಗೆ ನಿಮ್ಮ ಪಕ್ಷ ಎರಡು ನಾಲಿಗೆಯಲ್ಲಿ ಯಾಕೆ ಮಾತನಾಡುತ್ತಿದೆ? ಚುನಾವಣೆಯ ಮೊದಲು ನಮ್ಮ ಪರ, ಈಗ ಗೋವಾ ಪರ. ಹುಬ್ಬಳ್ಳಿ ಸಭೆಯಲ್ಲಿ ಒಂದೇ ನಾಲಗೆಯಲ್ಲಿ ಸ್ಪಷ್ಟೀಕರಣ ಕೊಟ್ಟು ಬಿಡಿ ಎಂದು ಪ್ರಶ್ನಿಸಿದ್ದಾರೆ.