ಮಕ್ಕಳ ಜೊತೆ ರಕ್ಷಾಬಂಧನ ಆಚರಿಸಿದ ಪ್ರಧಾನಿ ಮೋದಿ.

45
firstsuddi

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ರಕ್ಷಾಬಂಧನ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ನಿವಾಸದ ಸಿಬ್ಬಂದಿಯ ಹೆಣ್ಣುಮಕ್ಕಳು ಮೋದಿಗೆ ರಾಖಿ ಕಟ್ಟಿದರು. ಪ್ರಧಾನಮಂತ್ರಿಗಳ ಕಚೇರಿಯ ಸ್ವಚ್ಛತಾ ಕಾರ್ಮಿಕರು, ಉದ್ಯಾನ ನಿರ್ವಹಣೆ ಮಾಡುವವರು, ವಾಹನ ಚಾಲಕರ ಪುತ್ರಿಯರೊಂದಿಗೆ ಪಿಎಂ ಮೋದಿ ಹಬ್ಬವನ್ನು ಆಚರಿಸಿದ್ದರಿಂದ ಇದು ವಿಶೇಷ ರಕ್ಷಾಬಂಧನ ಆಚರಣೆಯಾಗಿತ್ತು.