ಲಕ್ನೋ : ಮದುವೆಯಾದ ಮೂರೇ ದಿನಕ್ಕೆ ಕೊರೊನಾಗೆ ನವವಿವಾಹಿತ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಜಾಟಾನ್ ನಿವಾಸಿ ಅರ್ಜುನ್ ಕೊರೊನಾಗೆ ಬಲಿಯಾದ ಯುವಕ. ಏ,25 ರಂದು ಬಬಲಿ ಎನ್ನುವ ಯುವತಿಯ ಜೊತೆ ಅರ್ಜುನ್ ಹಸೆಮಣೆ ಏರಿದ್ದರು. ಮದುವೆ ಮುಗಿಸಿ ಮನೆಗೆ ಬಂದ ದಿನವೇ ಅರ್ಜುನ್ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅರ್ಜುನ್ ನನ್ನು ಕುಟುಂಬಸ್ಥರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೂಡಲೇ ಅರ್ಜುನ್ ನನ್ನು ಜಿಲ್ಲಾಸ್ಪತ್ರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 29ರಂದು ಆಕ್ಸಿಜನ್ ಕೊರತೆಯಿಂದಾಗಿ ಅರ್ಜುನ್ ಸಾವನ್ನಪ್ಪಿದ್ದಾರೆ. ಮಗ ಮತ್ತು ಪತಿಯನ್ನು ಕಳೆದುಕೊಂಡ ಆ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.










