ಮಹಾಕುಂಭಮೇಳದಲ್ಲಿ ಮತ್ತೊಂದು ಅಗ್ನಿ ಅವಘಡ.

20

ಉತ್ತರ ಪ್ರದೇಶದ ಪ್ರಯಾಗ್ ರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇಂದು ಸೆಕ್ಟರ್ 18 ರ ಶಂಕರಾಚಾರ್ಯ ಮಾರ್ಗ್‍ನಲ್ಲಿ ಬೃಹತ್ ಅಗ್ನಿ ಅನಾಹುತ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಮಹಾ ಕುಂಭಮೇಳದಲ್ಲಿ ಸಂಭವಿಸಿದ 3ನೇ ಅಗ್ನಿ ಅವಘಡ ಇದಾಗಿದೆ. ಕಳೆದ ತಿಂಗಳು, ಮೇಳ ಮೈದಾನದ ಸೆಕ್ಟರ್ 19 ರಲ್ಲಿ ಬೃಹತ್ ಸಿಲಿಂಡರ್ ಸ್ಫೋಟಗಳು ಡೇರೆಗಳನ್ನು ನಾಶಪಡಿಸಿದವು. ಸ್ಫೋಟಗಳ ದೃಶ್ಯಗಳನ್ನು ಸೇತುವೆಯಿಂದ ರೈಲು ಪ್ರಯಾಣಿಕರು ಸೆರೆಹಿಡಿದಿದ್ದರು. ಅದೃಷ್ಟವಶಾತ್, ಜನವರಿಯಲ್ಲಿ ನಡೆದ ಬೆಂಕಿಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿರಲಿಲ್ಲ. ಅಧಿಕಾರಿಗಳು ಬೆಂಕಿಯನ್ನು ತ್ವರಿತವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು.