ನವದೆಹಲಿ : ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು 2023ರ ಮಾರ್ಚ್ 31 ಕೊನೆಯ ದಿನವಾಗಿದೆ. ಅಷ್ಟರೊಳಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ನಿಷ್ಕ್ರಿಯವಾಗಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಹೇಳಿದೆ.
ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ವಿಧಿಸಿದ್ದ ಗಡುವನ್ನು ಮಂಡಳಿಯು ಹಲವು ಬಾರಿ ವಿಸ್ತರಣೆ ಮಾಡಿದೆ. ಎರಡೂ ಕಾರ್ಡ್ ಗಳನ್ನು ಲಿಂಕ್ ಮಾಡುವುದಕ್ಕೆ 2022ರ ಮಾರ್ಚ್ 31ರ ಗಡುವು ನೀಡಲಾಗಿತ್ತು. ಈ ಗಡುವಿನ ಒಳಗೆ ಲಿಂಕ್ ಮಾಡದವರು ಈಗ ದಂಡ ಪಾವತಿಸುವ ಮೂಲಕ ಲಿಂಕ್ ಮಾಡುವ ಅವಕಾಶ ಹೊಂದಿದ್ದಾರೆ. ಆದರೆ, 2023ರ ಮಾರ್ಚ್ 31ರ ಬಳಿಕ ಈ ಅವಕಾಶವೂ ಇಲ್ಲವಾಗಲಿದೆ.
ಈ ಕುರಿತು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದ್ದು, ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ವಿನಾಯಿತಿ ಪಡೆದ ವರ್ಗದಲ್ಲಿ ಬರದ ಎಲ್ಲಾ ಪ್ಯಾನ್ ಹೊಂದಿರುವವರಿಗೆ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ 2023ರ ಮಾರ್ಚ್ 31 ಕೊನೆಯ ದಿನವಾಗಿದೆ. ಅಷ್ಟರೊಳಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ನಿಷ್ಕ್ರಿಯವಾಗಲಿದೆ. ತಡ ಮಾಡಬೇಡಿ, ಇಂದೇ ಲಿಂಕ್ ಮಾಡಿ ಎಂದು ತಿಳಿಸಿದೆ.










