ಮಾನ ಮರ್ಯಾದೆ ಇರುವ ಸರ್ಕಾರ ಕೂಡಲೇ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ತೆಗೆದುಕೊಳ್ಳಬೇಕು – ಸಿದ್ದರಾಮಯ್ಯ.

111
Firstsuddi

ಬೆಂಗಳೂರು : ರಮೇಶ್ ಜಾರಕಿಹೊಳಿ ಅವರ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ದ ಕಿಡಿ ಕಾರಿದರು.

ಮಾನ ಮರ್ಯಾದೆ ಇದ್ದರೆ ರಮೇಶ್ ಜಾರಕಿಹೊಳಿ ಅವರು ರಾಜಿನಾಮೆ ಪಡೆಯಲಿ, ಈ ಹಿಂದೆ ಹೆಚ್.ವೈ ಮೇಟಿ ಅವರ ಪ್ರಕರಣ ಇದೇ ರೀತಿಯಾಗಿತ್ತು. ಆ ಸಿಡಿಯಲ್ಲಿ ಏನೂ ಇರಲಿಲ್ಲ. ಆದರೂ ನಾನು ರಾಜೀನಾಮೆ ತೆಗೆದುಕೊಂಡಿದ್ದೇನೆ. ಮೇಟಿಯವರು ಕೂಡ ವೀಡಿಯೋವನ್ನು ಫೇಕ್ ಎಂದು ಹೇಳಿದ್ದರು. ಈ ಪ್ರಕರಣ ಸಂಬಂಧ ಸಿಬಿಐ ತನಿಖೆ ಆಮೇಲೆ ಮಾಡಲಿ. ಈಗ ಮಾನ-ಮರ್ಯಾದೆ ಇದ್ದರೆ ರಾಜೀನಾಮೆ ತೆಗೆದುಕೊಳ್ಳಬೇಕೋ, ಬೇಡವೋ ಎಂದು ಪ್ರಶ್ನಿಸಿದರು. ಮೇಟಿ ರಾಜೀನಾಮೆಯನ್ನು ನಾವು ಯಾಕೆ ತೆಗೆದುಕೊಂಡಿದ್ದೇವೆ..? ಆ ಸಿಡಿಯಲ್ಲಿ ಏನೂ ಇರಲಿಲ್ಲ. ಆದರೆ ಇದು ತಲೆ ತಗ್ಗಿಸುವಂತಹ ರೀತಿಯಲ್ಲಿದೆ ಎಂದರು.