ಮೀನುಗಾರರೊಂದಿಗೆ ಸಮುದ್ರಕ್ಕಿಳಿದು ಈಜಾಡಿ ಸಂಭ್ರಮ ಪಟ್ಟ ರಾಹುಲ್ ಗಾಂಧಿ.

113
Firstsuddi

ತಿರುವನಂತಪುರಂ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೊಲ್ಲಂನಲ್ಲಿ ಮೀನುಗಾರರೊಂದಿಗೆ ಸಮುದ್ರಕ್ಕಿಳಿದು ಈಜಾಡಿ ಸಂಭ್ರಮ ಪಟ್ಟರು.

ಮೀನುಗಾರರು ಸಮುದ್ರಕ್ಕೆ ಇಳಿದು ಮೀನು ಹಿಡಿಯಲು ಬಲೆ ಬೀಸಿ ಸಮುದ್ರಕ್ಕೆ ಜಿಗಿದರು. ಈ ವೇಳೆ ಜೊತೆಗಿದ್ದ ರಾಹುಲ್ ಗಾಂಧಿ ಅವರು ನೀರಿಗೆ ಧುಮುಕಿ ಸುಮಾರು 10 ನಿಮಿಷಗಳ ಕಾಲ ನೀರಿನಲ್ಲಿ ಈಜಾಡಿದರು.

ನಮ್ಮೊಂದಿಗೆ ಹೇಳದೆ ಸಮುದ್ರಕ್ಕೆ ಧುಮುಕಿದ ರಾಹುಲ್ ಅವರನ್ನು ಕಂಡು ನಾವೂ ಭಯಭೀತರಾದೆವು. ಆದರೆ ಅವರು ಮಾತ್ರ ಆರಾಮಾಗಿ ನೀರಿನಲ್ಲಿ 10 ನಿಮಿಷ ಕಾಲಕಳೆದರು. ರಾಹುಲ್ ಒಬ್ಬ ಉತ್ತಮ ಈಜುಗಾರ ಎಂದು ಜೊತೆಗಿದ್ದ ಮುಖಂಡರು ತಿಳಿಸಿದ್ದಾರೆ.