ಮುಂಬೈ : ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಮತ್ತೊಮ್ಮೆ ಬೆದರಿಕೆ ಕರೆಗಳು ಬಂದಿವೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಡಿಸ್ಪ್ಲೇ ನಂಬರ್ ಗೆ ಬೆದರಿಕೆ ಕರೆ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿಯಿಂದ ಮುಖೇಶ್ ಅಂಬಾನಿ ಅವರಿಗೆ ಒಟ್ಟು 8 ಬೆದರಿಕೆ ಕರೆಗಳು ಬಂದಿವೆ. ವರದಿಗಳ ಪ್ರಕಾರ, ಕರೆ ಮಾಡಿದವರು ಅಂಬಾನಿ ಕುಟುಂಬಕ್ಕೆ ಮೂರು ಗಂಟೆಗಳೊಳಗೆ ಏನಾದರೂ ದೊಡ್ಡದು ಅನಾಹುತವಾಗಲಿದೆ ಎಂದು ಹೇಳಿದ್ದಾರೆ. ಸದ್ಯ ಆಸ್ಪತ್ರೆ ಅಧಿಕಾರಿಗಳು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾವು ಆಸ್ಪತ್ರೆಯಿಂದ ಬೆದರಿಕೆ ಕರೆಯ ಕುರಿತು ದೂರು ಸ್ವೀಕರಿಸಿದ್ದು, ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ಮುಂಬೈ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.










