ಮೂಡಿಗೆರೆ : ಅಪರಿಚಿತ ವಾಹನ ಹರಿದು ಹೆಬ್ಬಾವು ಸಾವು…

405
firstsuddi

ಕೊಟ್ಟಿಗೆಹಾರ : ಅಪರಿಚಿತ ವಾಹನ ಹರಿದು ಹೆಬ್ಬಾವಿನ ಮರಿಯೊಂದು ಮೃತಪಟ್ಟ ಘಟನೆ ಅತ್ತಿಗೆರೆ ಸಮೀಪದ ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವಾಹನ ಹರಿದ ತೀವ್ರತೆಗೆ ಹೆಬ್ಬಾವಿನ ಮರಿಯ ದೇಹ ನಜ್ಜುಗುಜ್ಜಾಗಿದೆ. ಹೆದ್ದಾರಿಯಲ್ಲಿ ವಾಹನ ಹರಿದು ವನ್ಯಮೃಗಗಳು ಸಾವಿಗೀಡಾಗುತ್ತಿರುವ ಘಟನೆಗಳು ಹೆಚ್ಚುತ್ತಿದ್ದು ಅಪರೂಪದ ಜೀವಿಗಳು ಮೃತ ಪಡುತ್ತಿರುವುದು ಶೋಚನೀಯ ಎಂದು ಪ್ರಾಣಿಪ್ರಿಯರು ಅಭಿಪ್ರಾಯ ಪಟ್ಟಿದ್ದಾರೆ.