ಮೂಡಿಗೆರೆ : ಎಸ್‍ಎಸ್‍ಎಲ್‍ಸಿ ಫಲಿತಾಂಶ-ಬಣಕಲ್‍ನ ವಿದ್ಯಾಭಾರತಿ ಶಾಲೆಗೆ ಶೇ 100 ಫಲಿತಾಂಶ…

227
firstsuddi

ಕೊಟ್ಟಿಗೆಹಾರ : ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಬಣಕಲ್‍ನ ಶ್ರೀ ವಿದ್ಯಾಭಾರತಿ ಶಾಲೆ ಶೇ 100 ಫಲಿತಾಂಶ ಪಡೆದಿದೆ.
ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಒಟ್ಟು 31 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು2 ವಿದ್ಯಾರ್ಥಿಗಳು ಅತ್ಯುನ್ನತ, 26 ವಿದ್ಯಾರ್ಥಿಗಳು ಪ್ರಥಮ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ. ಅನುಜ್ಞಾ ಎಚ್.ಎಂ 574 (91.84%), ಪ್ರಣಿತಾ ಪೂಜಾರಿ 572 (91.52%) ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಉತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲಾ ಸಮಿತಿ ಅಧ್ಯಕ್ಷ ಶಿವರಾಮಶೆಟ್ಟಿ, ಪ್ರೌಡಶಾಲಾ ಮುಖ್ಯ ಶಿಕ್ಷಕಿ ಮಾಲತಿ ಹಾಗೂ ಶಿಕ್ಷಕರು, ಪೋಷಕರು ಅಭಿನಂದನೆ ತಿಳಿಸಿದ್ದಾರೆ.
ಬೆಟ್ಟಗೆರೆ ಶಾಲೆಗೆ ಶೇ 100 ಫಲಿತಾಂಶ
ಬೆಟ್ಟಗೆರೆಯ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಡಶಾಲೆಯು ಶೇ 100 ಫಲಿತಾಂಶ ಪಡೆದಿದ್ದು 13 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕೊಟ್ಟಿಗೆಹಾರದ ಸರ್ಕಾರಿ ಪ್ರೌಡಶಾಲೆಗೆ ಶೇ 94 ಫಲಿತಾಂಶ ಬಂದಿದ್ದು 3 ವಿದ್ಯಾರ್ಥಿಗಳು ಅತ್ಯುನ್ನತ, 6 ವಿದ್ಯಾರ್ಥಿಗಳು ಪ್ರಥಮ, 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.
ಬಣಕಲ್ ಪ್ರೌಡಶಾಲೆಯು ಕನ್ನಡ ಮಾದ್ಯಮದಲ್ಲಿ ಶೇ 56 ಮತ್ತು ಆಂಗ್ಲ ಮಾದ್ಯಮದಲ್ಲಿ ಶೇ 76 ಫಲಿತಾಂಶ ಪಡೆದಿದ್ದು ಪರೀಕ್ಷೆ ಬರೆದ 95 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಅತ್ಯುತ್ತಮ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.