ಕೊಟ್ಟಿಗೆಹಾರ : ಹೇಮಾವತಿ ನದಿಪಾತ್ರದ ಕಲೆ ಸಂಸ್ಕøತಿ ಹಾಗೂ ನದಿಮೂಲದ ಅಭಿವೃದ್ದಿ ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟದ ಮೂಲ ಧ್ಯೇಯವಾಗಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಹೇಳಿದರು.
ಜಾವಳಿಯಲ್ಲಿ ಇಂದು ನಡೆದ ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು.
ಹೇಮಾವತಿ ನದಿ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ತುಮಕೂರು, ಮತ್ತು ಮೈಸೂರು ಜಿಲ್ಲೆಗಳಿಗೆ ಜೀವನದಿಯಾಗಿದ್ದು ಈ ಜಿಲ್ಲೆಗಳಲ್ಲಿನ ಕಲೆ ಸಂಸ್ಕøತಿಯನ್ನು ಬೆಳೆಸುವುದರ ಜೊತೆಗೆ ನದಿಮೂಲದ ಸಂರಕ್ಷಣೆ ಮಾಡುವುದು ಒಕ್ಕೂಟದ ಉದ್ದೇಶವಾಗಿದೆ ಎಂದರು.
ಒಕ್ಕೂಟದ ನಿರ್ದೇಶಕರಾದ ಎಂ.ಎಸ್ ಅಶೋಕ್ ಮಾತನಾಡಿ, ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸಲು ಯೋಜನೆ ಮತ್ತು ಅಭಿವೃದ್ದಿ, ಕೃಷಿ ಮತ್ತು ತೋಟಗಾರಿಕೆ, ಪರಿಸರ ಸಂರಕ್ಷಣೆ, ಸಾಹಿತ್ಯ ವಿಭಾಗ, ಸಮುದಾಯ ಅಭಿವೃದ್ದಿ ವಿಭಾಗ, ಸದಸ್ಯತ್ವ ನೋಂದಣಿ ವಿಭಾಗ, ಸಾಮಾಜಿಕ ಜಾಲತಾಣ ಹಾಗೂ ಪತ್ರಿಕಾ ಮಾಹಿತಿ, ಪ್ರವಾಸೋಧ್ಯಮ ಅಭಿವೃದ್ದಿ, ಕಾನೂನು ವಿಭಾಗ ಸೇರಿದಂತೆ ವಿವಿಧ ವಿಭಾಗಗಳನ್ನು ರಚಿಸಲಾಗಿದೆ ಎಂದರು.
ಒಕ್ಕೂಟದ ನಿರ್ದೇಶಕರಾದ ಎಂ.ಎಸ್ ಅಶೋಕ್ ಅವರ ಅಶೋಕ ಯುಕ್ತಿ ಪರಿಚಯಾತ್ಮಕ ಕೈಪಿಡಿಯನ್ನು ಸುರೇಂದ್ರ ಸಕಲೇಶಪುರ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟದ ಪಧಾಧಿಕಾರಿಗಳಾದ ಜಗದೀಶ್, ಸುರೇಂದ್ರ, ದೇವರಾಜ್, ಮಗ್ಗಲಮಕ್ಕಿ ಗಣೇಶ್, ಹಮೀದ್ ಸಬ್ಬೇನಹಳ್ಳಿ, ಸಂಜಯಗೌಡ, ಆದರ್ಶ ತರುವೆ, ಶಶಿಧರ್, ಆದರ್ಶ ಬಾಳೂರು,ಕೃಷ್ಣಾಚಾರ್, ಸುರೇಶ್‍ಗೌಡ, ಚನ್ನಕೇಶವಗೌಡ ಮುಂತಾದವರು ಇದ್ದರು.










