ಮೂಡಿಗೆರೆ : ಕಾಫಿ ನಾಡು ಒಂದು ಜಿಲ್ಲೆ, ಹಲವು ಜಗತ್ತು ಅನ್ನುವ ಮಾತಿಗೆ ಪೂರಕವಾಗಿದೆ…

588
firstsuddi

ಮೂಡಿಗೆರೆ : ಹೆಂಗ್ ಫೋಟೋ ಹೊಡ್ಕೋಂತೀಯಾ ಹೊಡ್ಕೋಳಪ್ಪಾ ಅಂತ ಫೋಸ್ ಕೊಟ್ಟಿರುವ ಕಡವೆ, ಪಾಪಿ ಮನುಷ್ಯ ಬಂದ ಹಿಂದೆ ಹೋಗು ಮಗ ಅಂತ ಕಾಲಲ್ಲೇ ಮರಿಯನ್ನು ರಕ್ಷಿಸುತ್ತಿರುವ ಆನೆ, ಇಂತಹಾ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದ ಕಾಫಿನಾಡು ಒಂದು ಜಿಲ್ಲೆ ಹಲವು ಜಗತ್ತು ಅನ್ನುವ ಮಾತಿಗೆ ಪೂರಕವಾಗಿದೆ. ತಾಲ್ಲೂಕಿನ ಕಾಡಂಚಿನ ಗ್ರಾಮ ಬಿದಿರುತಳದಲ್ಲಿ ಕಣ್ಣು ಹಾಯಿಸಲೆಲ್ಲಾ ಕಾಡು ಪ್ರಾಣಿಗಳ ಹಿಂಡು ಗೋಚರವಾಗುತ್ತಿದೆ. ಒಂದೆಡೆ ನರಿ, ಮತ್ತೊಂದಡೆ ಆನೆ, ಮಗದೊಡೆ ಜಿಂಕೆ, ಇನ್ನೊಂದೆಡೆ ಕಡವೆಗಳ ಗುಂಪು ಕಾಣುತ್ತಿದ್ದು, ಸ್ಥಳೀಯರಿಗೆ ಒಂದೆಡೆ ಖುಷಿ, ಮತ್ತೊಂದೆಡೆ ಆತಂಕವಾಗಿದೆ. ಗ್ರಾಮದ ಸತೀಶ್ ಎಂಬುವವರು ತೋಟಕ್ಕೆ ಹೋಗುವಾಗ ಹಾದಿಯುದ್ಧಕ್ಕೂ ಸೆರೆ ಸಿಕ್ಕ ಮಲೆನಾಡಿನ ದೃಶ್ಯಕಾವ್ಯದ ಫೋಟೋಗಳಿವು. ಗ್ರಾಮದಂಚಿನಲ್ಲಿ ಹೀಗೆ ಪ್ರಾಣಿಗಳ ಗುಂಪನ್ನು ಕಂಡ ಸ್ಥಳೀಯರ ಆತಂಕ ಮತ್ತಷ್ಟು ಹೆಚ್ಚಿದ್ದು, ಸ್ಥಳಾಂತರ ಕೂಗು ಕೇಳಿ ಬಂದಿದೆ. ಈಗಾಗಲೇ ಬಿದಿರುತಳ ಗ್ರಾಮದ ಸ್ಥಳಾಂತರದ ಪ್ರಸ್ಥಾವನೆ ಸರ್ಕಾರದ ಮಟ್ಟದಲ್ಲಿದೆ. ಸ್ಥಳಿಯರು ಕೂಡಲೇ ನಮ್ಮನ್ನು ಸ್ಥಳಾಂತರ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.