ಕೊಟ್ಟಿಗೆಹಾರ : ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ಇಂದು ಮಧ್ಯಾಹ್ನ 10 ಚಕ್ರದ ಲಾರಿಯೊಂದು ಸಿಲುಕಿ ಸಂಚಾರಕ್ಕೆ ಅಡಚಣೆಯಾಯಿತು.
ತಿರುವಿನಲ್ಲಿ ಉದ್ದದ ಲಾರಿಯು ತಿರುಗಿಸಲಾಗದೇ ರಸ್ತೆಯ ಮಧ್ಯದಲ್ಲೇ ನಿಂತು ಒಂದು ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತವಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ನಂತರ ಸ್ಥಳೀಯರು ಲಾರಿಯನ್ನು ಬದಿಗೆ ನಿಲ್ಲಿಸಿ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಪರೀಕ್ಷಿತ್ ಜಾವಳಿ ಇದ್ದರು.










