ಮೂಡಿಗೆರೆ : ಜೆಸಿಐ ವಿಸ್ಮಯದ ನೂತನ ಅಧ್ಯಕ್ಷರಾಗಿ ರವಿ ವಾಟೇಖಾನ್ ಅವರು ಪ್ರಮಾಣ ವಚನ ಸ್ವೀಕಾರ…

329
firstsuddi

ಮೂಡಿಗೆರೆ : ಬಣಕಲ್ ಜೆಸಿಐ ವಿಸ್ಮಯದ ವತಿಯಿಂದ ಬಣಕಲ್ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಶನಿವಾರ ಸಂಜೆ ನಡೆದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ರವಿ ವಾಟೇಖಾನ್ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಜೆಸಿಐ ವಿಸ್ಮಯ ಪದಗ್ರಹಣ ಕಾರ್ಯಕ್ರಮದಲ್ಲಿ ರವಿ ವಾಟೇಖಾನ್ ಅವರಿಗೆ ನಿರ್ಗಮಿತ ಅಧ್ಯಕ್ಷ ಎನ್.ಟಿ.ದಿನೇಶ್ ಅಧಿಕಾರ ಹಸ್ತಾಂತರಿಸಿದರು. ನಂತರ ಮಾತನಾಡಿದ ವಲಯಾಧ್ಯಕ್ಷೆ ಸಮತಾ ಮಿಸ್ಕಿತ್, ಜೆಸಿಐ ದೇಶದಲ್ಲೇ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದ್ದು,ಆಧುನಿಕ ಯುಗಕ್ಕೆ ಯುವಜನರು ಸಂಸ್ಥೆಯಲ್ಲಿ ತೊಡಗಿಸಿಕೊಂಡು ಉತ್ತಮ ನಾಯಕತ್ವದ ಹೊಣೆಯ ಜವಾಬ್ದಾರಿ ವಹಿಸುವ ಕೌಶಲ್ಯತೆ ಅರಿಯಬೇಕು. ಸಾಮಾಜಿಕ ಸೇವೆ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.
ರೋಟರಿಯ ಮಾಜಿ ಗವರ್ನರ್ ಡಿ.ಎಸ್.ರವಿ ದುಂಡುಗ ಮಾತನಾಡಿ, ದೇಶದಲ್ಲಿ ಖಾಸಗಿ ಸಂಸ್ಥೆಗಳು ಸಮಾಜೇತರ ಕೆಲಸಗಳಲ್ಲಿ ತೊಡಗಿಸಿಕೊಂಡು ದೇಶಕ್ಕೆ ಅದರಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ದೇಶದ ಸದೃಢ ನಿರ್ಮಾಣಕ್ಕೆ ನಾಯಕತ್ವದ ಕೊರತೆ ನೀಗಿಸಬೇಕಾದರೆ ಜೆಸಿಐ,ರೋಟರಿಯಂತಹ ಸಂಸ್ಥೆಗಳಿಗೆ ಯುವ ಪೀಳಿಗೆ ಸೇರಿ ಮುಂದಾಳುತ್ವ ವಹಿಸುವ ಅನಿವಾರ್ಯತೆ ಇದೆ ಎಂದರು. ನೂತನ ಅಧ್ಯಕ್ಷ ರವಿ ವಾಟೇಖಾನ್ ಮಾತನಾಡಿ, ತಮಗೆ ನೀಡಿದ ಅಧ್ಯಕ್ಷತೆಯ ಹೊಣೆಗಾರಿಕೆಗೆ ಕೃತಜ್ಞತೆ ಸಲ್ಲಿಸಿ ಸರ್ವರ ಸಹಕಾರ ಕೋರಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಜೆಸಿಐ ಬಣಕಲ್ ವಿಸ್ಮಯದ ಅಧ್ಯಕ್ಷ ಎನ್.ಟಿ.ದಿನೇಶ್, ವಲಂiÀi ಉಪಾಧ್ಯಕ್ಷ ಡಿ. ಪ್ರಸಾದ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷ ಸುರೇಶ್ ಶೆಟ್ಟಿ, ಟಿ.ಎಂ.ಗಜೇಂದ್ರ, ಹರ್ಷವರ್ಧನ್, ರವಿಪಟೇಲ್, ಎಂ.ವಿ.ಸೋಮೇಶ್, ಬಿ.ಎ.ಕವೀಶ್, ಬಿ.ಎಸ್.ಲಕ್ಷ್ಮಣ್, ರವಿಶಂಕರ್,ಶರತ್ ಫಲ್ಗುಣಿ, ಜೇಸಿರೆಟ್ ಅಧ್ಯಕ್ಷೆ ರಜಿತಾರತ್ನಾಕರ್, ಸ್ವಾತಿನವೀನ್, ಅರ್ಚನ ಸುಂದರೇಶ್ ಇದ್ದರು.