ಮೂಡಿಗೆರೆ:ಟಿಎಪಿಸಿಎಂಎಸ್  ‌ಚುನಾವಣೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಮೇಲುಗೈ…

564
ಮೂಡಿಗೆರೆ:ತಾಲೂಕು ವ್ಯವಸಾಯೋತ್ಪನ್ನ  ಮಾರಾಟ ಸಹಕಾರ ಸಂಘಕ್ಕೆ( ಟಿಎಪಿ ಸಿಎಂಎಸ್ )
ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್- ಕಾಂಗ್ರೆಸ್
ಗೆಲುವು ಸಾಧಿಸಿದೆ. 7 ಮಂದಿ ಜೆಡಿಎಸ್- ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದೆರೆ. ಬಿಜೆಪಿ ಬೆಂಬಲಿತ 8 ಅಭ್ಯರ್ಥಿಗಳಲ್ಲಿ  ಕೇವಲ 1 ಸ್ಥಾನ ಗಳಿಸುವ ಮೂಲಕ ಸೋಲು ಕಂಡಿದೆ.
 ಅಭ್ಯರ್ಥಿಗಳು ಮತ ಗಳಿಸಿರುವ ವಿವರ:
 ಸಾಮಾನ್ಯ ಸ್ಥಾನ ರಂಜನ್ ಅಜಿತ್ ಕುಮಾರ್-1210, ನಾಗೇಶ್ ಗೌಡ-845,
ಸಾಮಾನ್ಯ ಅಭಿಜಿತ್ ಮುಗ್ಗಲಮಕ್ಕಿ 1071, ಚಂದ್ರೇಶ್-978
ಪರಿಶಿಷ್ಟ ಜಾತಿ ಮೀಸಲು ಗಣೇಶ್- 745, ಜಗನಾಥ್ 776,
(ಹಿಂದುಳಿದ ವರ್ಗ ಬಿಸಿಎಂಬಿ) ಜಯಂತ್ ಕುಮಾರ್-968, ವೆಂಕಟೇಶ್-944.,
(ಮಹಿಳಾ ಮೀಸಲು ಸ್ಥಾನ ಕೆ.ಪಿ.ಭಾರತಿ 938, ನೇಪಾ ಆದಿತ್ಯ- 858. ರೇಣುಕಾ-953,
 ಪರಿಶಿಷ್ಟ ಪಂಗಡ ಮೀಸಲು ವಿಠ್ಠಲ- 608, ಹೇಮಶೇಖರ್-916 ಮತ ಗಳಿಸಿದ್ದಾರೆ.
 
ಚುನಾವಣಾಧಿಕಾರಿಯಾಗಿ ಗುರುಮೂರ್ತಿ ಕಾರ್ಯನಿರ್ವಹಿಸಿದ್ದರು.ಸರ್ಕಲ್ ಇನ್ಸ್ಪೆಕ್ಟರ್ ಜಗನಾಥ್,ಠಾಣಾಧಿಕಾರಿ ರವಿ ಅವರ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು ಹಾಜರಿದ್ದರು.