ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ  ಸಾರ್ವಜನಿಕರ‍ ಆಕ್ರೋಶ…

579
Firstsuddi
ಮೂಡಿಗೆರೆ -ತಾಲ್ಲೂಕಿನ ಕಿತ್ತಲೆಗಂಡಿ ಹೇಮಾವತಿ ನದಿಯಿಂದ ಮೂಡಿಗೆರೆಗೆ ನೀರು ಸರಬರಾಜು ಮಾಡುವ ಪೈಪ್ ಲೈನ್  ಕಾಮಗಾರಿ ನಡೆಯುತ್ತಿದ್ದು  ಬೈದಹಳ್ಳಿ  ಕ್ರಾಸ್ ನಿಂದ ಮೂಡಿಗೆರೆಯವರೆಗೂ  ರಸ್ತೆಯ ಬಲಭಾಗದಲ್ಲಿ ಪೈಪ್ ಅಳವಡಿಸುವ ಕೆಲಸ ಚಾಲ್ತಿಯಲ್ಲಿದ್ದು. ಮಣ್ಣನ್ನು ರಸ್ತೆಗೆ ಹಾಕಿದ್ದರಿಂದ ವಾಹನ ಸವಾರರಿಗೆ ಹಾಗು ಸಾರ್ವಜನಿಕರಿಗೆ  ಸ್ಥಳೀಯ ವ್ಯಾಪಾರಸ್ಥರಿಗೆ ಸಮಸ್ಯೆಯಾಗುತ್ತಿದ್ದು. ಕೌಸರ್ ಅಂಗಡಿ ಮುಂಭಾಗದಲ್ಲಿ ಕಾಮಗಾರಿ ಸ್ಥಗಿತವಾಗಿ ಐದು ದಿನ ಕಳೆದಿದ್ದು ಸಂಪೂರ್ಣ ಮಣ್ಣನ್ನು ರಸ್ತೆಗೆ ಹಾಕಿದ್ದರಿಂದ  ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಕಡಿದಾಳ್ ಬ್ರಿಜೇಶ್ ಅವರು ರಸ್ತೆ ಕಿರಿದಾಗಿದ್ದರಿಂದ  ಪಾದಚಾರಿಗಳಿಗೆ  ತೊಂದರೆಯಾಗುತ್ತಿದ್ದು ಚಿಕ್ಕಪುಟ್ಟ ಅಪಘಾತಗಳು ಸಂಭವಿಸಿದ್ದು  ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು  ಕ್ರಮಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.