ಮೂಡಿಗೆರೆ:ಬಂಕೇನಹಳ್ಳಿ:ಕಾಳಿಂಗ ಸರ್ಪ ಸೆರೆ.

224

ಬಣಕಲ್: ಇಲ್ಲಿಗೆ ಸಮೀಪದ ಬಂಕೇನಹಳ್ಳಿ ಕೃಷ್ಣಭಟ್ ಅವರ ಕಾಫಿ ತೋಟದ ಲೈನ್ ಸಮೀಪ ಬೃಹದಾಕಾರದ ಬಾರಿ,ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಯಿತು.ಬಂಕೇನಹಳ್ಳಿಯ ಕಾಫಿ ತೋಟದಲ್ಲಿ ಸುಮಾರು ಸಮಯದಿಂದ ಅಗೋಚರವಾಗಿ ಸಂಚರಿಸುತ್ತಿದ್ದ ಕಾಳಿಂಗಸರ್ಪವು ಇಂದು ಬೆಳಗ್ಗೆ ತೋಟದ ಕಾರ್ಮಿಕರ ಕಣ್ಣಿಗೆ ಕಾಣಿಸಿಕೊಂಡು ಭೀತಿ ಹುಟ್ಟಿಸಿತು.ಕೂಡಲೇ ತೋಟದ ಮಾಲಿಕ ಕೃಷ್ಣಭಟ್ಅವರು ಬಣಕಲ್‍ನ ಉರಗಪ್ರೇಮಿ ಕೆ.ಎಚ್.ಮಹಮ್ಮದ್ ಆರೀಫ್ ಅವರಿಗೆ ವಿಷಯ ಮುಟ್ಟಿಸಿದ್ದು.ಬಾರಿ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಚಾರ್ಮಾಡಿಯ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.ಈ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳಾದ ಬಸವರಾಜ್ ಬಗಲಿ,ಪೂರ್ಣೇಶ್, ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರವಿಗೌಡ,ವಿನಯ್‍ಕೊಟ್ಟಿಗೆಹಾರ, ಅಮ್ಜದ್,ಅಬೂಬೇಕರ್,ಶಕೀಲ್ ಮತ್ತಿತರರು ಇದ್ದರು.