ಮೂಡಿಗೆರೆ : ಬಿಜೆಪಿ ಪಕ್ಷವು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ, ಲಯನ್ಸ್ ವೃತ್ತದಲ್ಲಿ ಸಂಭ್ರಮಾಚರಣೆ…

800
firstsuddi

ಮೂಡಿಗೆರೆ : ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ, ಪಟ್ಟಣದ ಲಯನ್ಸ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಯಿತು.
ಬೆಳಗ್ಗಿನಿಂದ ಜಾತಕ ಪಕ್ಷಿಯಂತೆ ಚುನಾವಣೆಯ ಫಲಿತಾಂಶವನ್ನು ಎದುರು ನೋಡುತ್ತಿದ್ದ ಕಾರ್ಯಕರ್ತರು ಹಾಗೂ ಮುಖಂಡರು ಶಾಸಕ ಎಂ.ಪಿ. ಕುಮಾರಸ್ವಾಮಿ ನೇತೃತ್ವದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜೈಕಾರ ಕೂಗಿ ವಿಜಯೋತ್ಸವ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜೆ.ಎಸ್. ರಘು, ಬಿಜೆಪಿ ಮುಖಂಡರಾದ ಹಳೇಮೂಡಿಗೆರೆ ಜಗದೀಶ್, ವಿನೋದ್ ಕಣಚೂರು, ಆದರ್ಶ್ ತರುವೆ, ಮಗ್ಗಲಮಕ್ಕಿ ಕೀರ್ತಿ, ಕನ್ನೆಹಳ್ಳಿ ಭರತ್, ಹಳೇಕೋಟೆ ವಿನಯ್, ಸುಧೀರ್ ಜನ್ನಾಪುರ, ಹಳ್ಳಿಬೈಲು ಗಿರೀಶ್, ರವಿ, ಮಾಜಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಮಧೀಶ್, ಬಿಜೆಪಿ ಯುವ ಮುಖಂಡರಾದ ಪರೀಕ್ಷಿತ್ ಜಾವಳಿ, ಸಂಜಯ್ ಕೊಟ್ಟಿಗೆಹಾರ ,ಬಾಲಚಂದ್ರ ಶೆಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.