ಕೊಟ್ಟಿಗೆಹಾರ:ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಮನೆಯೊಳಗೆ ನುಗ್ಗಿದ ಘಟನೆ ತ್ರಿಪುರದಲ್ಲಿ ನಡೆದಿದೆ.
ಮಣ್ಣು ಸಾಗಿಸುತ್ತಿದ್ದ ಟ್ಯಾಕ್ಟರ್ವೊಂದು ತ್ರಿಪುರ ಗ್ರಾಮದ ಮೋಟಮ್ಮ ರಾಮಯ್ಯ ಎಂಬುವವರ ಮನೆಯ ಬಳಿ ಸಾಗಿದ್ದು ಚಾಲಕನ ನಿಯಂತ್ರಣ ತಪ್ಪಿ ಟ್ಯಾಕ್ಟರ್ ಮನೆಯೊಳಗೆ ನುಗ್ಗಿದ್ದು ಗೋಡೆ ಕುಸಿದು ಮನೆಯೊಳಗಿದ್ದ ವಸ್ತುಗಳು ನಜ್ಜುಗುಜ್ಜಾಗಿದೆ. ಅದೃಷ್ಟಾವಶಾತ್ ಮನೆಯೊಳಗೆ ಯಾರು ಇಲ್ಲದೆ ಇರುವುದರಿಂದ ಪ್ರಾಣಾಪಾಯವಾಗುವುದು ತಪ್ಪಿದಂತಾಗಿದೆ.










