ಮೂಡಿಗೆರೆ : ಮಹಿಳೆಯ ಮೊಬೈಲ್ ಕಸಿದು ಪರಾರಿಯಾದ ಅಪರಿಚಿತ…

165
firstsuddi

ಕೊಟ್ಟಿಗೆಹಾರ : ರಾತ್ರಿ ಸಮಯದಲ್ಲಿ ಕಚೇರಿಯಿಂದ ಮನೆಗೆ ಹೊರಟಿದ್ದ ಮಹಿಳೆಯೊಬ್ಬರ ಮೊಬೈಲ್ ನ್ನು ಅಪರಿಚಿತನೊಬ್ಬ ಕಸಿದು ಪರಾರಿಯಾದ ಘಟನೆ ತ್ರಿಪುರ ಗ್ರಾಮದ ಹಲಸಿನಕಟ್ಟೆ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಸೇವಾಪ್ರತಿನಿಧಿಯಾಗಿರುವ ಉಷಾ ಎಂಬುವವರು ನಿನ್ನೆ ರಾತ್ರಿ 8-30 ರ ಸುಮಾರಿಗೆ ಕಚೇರಿ ಕೆಲಸ ಮುಗಿಸಿ ಮನೆಗೆ ಹೊರಟ ಸಂದರ್ಭದಲ್ಲಿ ತ್ರಿಪುರ ಸಮೀಪದ ಹಲಸಿನಕಟ್ಟೆ ಎಂಬಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಉಷಾ ಅವರ ಬಳಿ ಇದ್ದ ಮೊಬೈಲ್ ನ್ನು ಕಸಿದುಕೊಂಡಿದ್ದು ಪರ್ಸನ್ನು ಕಸಿದುಕೊಳ್ಳಲು ಯತ್ನಿಸಿದಾಗ ಉಷಾ ಅವರು ಕೂಗಿಕೊಂಡಿದ್ದು ಅಪರಿಚಿತ ವ್ಯಕ್ತಿ ಮೊಬೈಲ್ ನೊಂದಿಗೆ ಪರಾರಿಯಾಗಿದ್ದಾನೆ. ಈ ಬಗ್ಗೆ ಉಷಾ ಅವರು ಬಣಕಲ್ ಠಾಣೆಗೆ ದೂರು ನೀಡಿದ್ದು ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಸೋಮಶೇಖರ್, ಬಣಕಲ್ ಠಾಣೆ ಪಿಎಸ್ಐ ಗಾಯತ್ರಿ, ಸಿಬ್ಬಂದಿ ಪವನ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.