ಮೂಡಿಗೆರೆ ವಕೀಲರ ಸಂಘದ ಅಧ್ಯಕ್ಷರಾಗಿ ಸಿದ್ದಯ್ಯ, ಉಪಾಧ್ಯಕ್ಷರಾಗಿ ಬಿ.ಟಿ ನಟರಾಜ್ ಆಯ್ಕೆ…

96
firstsuddi

ಮೂಡಿಗೆರೆ : ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಸಿದ್ದಯ್ಯ, ಉಪಾಧ್ಯಕ್ಷರಾಗಿ ಬಿ.ಟಿ ನಟರಾಜ್ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿ ಹೆಚ್.ಜಿ ಆದರ್ಶ್ , ಖಜಾಂಚಿ ನಿತಿನ್ ಕುವೆಲ್ಲೋ, ಸಹ ಕಾರ್ಯದರ್ಶಿಗಳಾಗಿ ಡಿ.ಎಸ್ ವೈಶಾಖ್ , ಲಹರಿ ದೀಪಕ್ ಆಯ್ಕೆಯಾಗಿದ್ದು, ವಕೀಲರ ಸಂಘದ ಸೀನಿಯರ್ ಕಮಿಟಿ ಪದಾಧಿಕಾರಿಗಳಾಗಿ ಹಿರಿಯ ವಕೀಲರಾದ ಎಂ.ಎಸ್ ಗೋಪಾಲಗೌಡ, ಕೆ.ಎಂ ಪ್ರಶಾಂತ್, ಬಿ.ಜಗದೀಶ್ ಎಂ.ವಿ ಜಯರಾಜ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಹಿರಿಯ ವಕೀಲರುಗಳಾದ ಲೋಕೇಶ್ ಚಪ್ಪರಗುತ್ತಿ, ಡಿ.ಕೆ ಪ್ರಸನ್ನ, ಜಯರಾಮ್, ಆದಿತ್ಯ ಸೇರಿದಂತೆ ಎಲ್ಲಾ ವಕೀಲರುಗಳು ಶುಭ ಹಾರೈಸಿದ್ದಾರೆ.