ಮೂಡಿಗೆರೆ ಸಂಪೂರ್ಣ ಸ್ಥಬ್ಧ ; ವಾರಾಂತ್ಯ ಕರ್ಫ್ಯೂ ಹಿನ್ನಲೆ ರಸ್ತೆಗಳೆಲ್ಲಾ ಖಾಲಿ ಖಾಲಿ..!

400
firstsuddi

ಮೂಡಿಗೆರೆ : ವಾರಾಂತ್ಯ ಕರ್ಫ್ಯೂ ಹಿನ್ನಲೆಯಲ್ಲಿ ಮೂಡಿಗೆರೆ ಪಟ್ಟಣ ಸಂಪೂರ್ಣ ಸ್ಥಬ್ಧ ಆಗಿದೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ಪಟ್ಟಣದ ಲಯನ್ಸ್ ವೃತ್ತದ ಬಳಿ ಚೆಕ್ ಪೋಸ್ಟ್ ಹಾಕಲಾಗಿದ್ದು, ಠಾಣಾಧಿಕಾರಿ ರವಿ ಹಾಗೂ ಪೊಲೀಸರು ಪಟ್ಟಣದಾದ್ಯಂತ ಗಸ್ತು ತಿರುಗುತ್ತಿದ್ದು, ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನವನ್ನು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಹ್ಯಾಂಡ್ ಪೋಸ್ಟ್ ನಿಂದ ಬಿಳುಗುಳದವರೆಗೂ ವಾಹನಗಳಿಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪೂರ್ತಿ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಯಾವುದೇ ನರಪಿಳ್ಳೆಯೂ ರಸ್ತೆಯಲ್ಲಿ ಇರಲಿಲ್ಲ. ಮೆಡಿಕಲ್, ಖಾಸಗಿ ಆಸ್ಪತ್ರೆ ಹಾಗೂ ಅಗತ್ಯ ಕೆಲಸಕ್ಕೆ ಬರಬೇಕಿದ್ದವರು ಮಾತ್ರ ವಾಹನಗಳಲ್ಲಿ ತುರ್ತಾಗಿ ಓಡಾಡುತ್ತಿದ್ದರು. ದಿನನಿತ್ಯ ಗಿಜುಗುಡುವ ಬಸ್ ಸ್ಟ್ಯಾಂಡ್ ವೃತ್ತ ಖಾಲಿ ಖಾಲಿಯಾಗಿ ಬಣಗುಟ್ಟುತ್ತಿದ್ದವು. ಕೊರೊನಾ ಭೀತಿಯ ನಡುವೆ ವಾರಾಂತ್ಯದ ಕರ್ಫ್ಯೂ ಕರೆಗೆ ಜನರೇ ಮನೆ ಸೇರಿದ್ದರು.