ಜನಸಾಮಾನ್ಯರು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ : ರವಿಕಲಾ ಪೈ.

143
firstsuddi

ಕೊಟ್ಟಿಗೆಹಾರ : ಜನಸಾಮಾನ್ಯರು ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದು ತರುವೆ ಗ್ರಾ.ಪಂ ಅಧ್ಯಕ್ಷೆ ರವಿಕಲಾ ಪೈ ಹೇಳಿದರು.

ಕೊಟ್ಟಿಗೆಹಾರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸಾಮಾನ್ಯ ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಒಂದೆ ಸೂರಿನಡಿ ಪಡೆಯಲು ಸಾಧ್ಯವಿದ್ದು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸಿಗುವ ಸರ್ಕಾರದ ಸೌಲಭ್ಯಗಳು ಗ್ರಾಮ ಮಟ್ಟದಲ್ಲಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸತೀಶ್, ಒಕ್ಕೂಟದ ಉಪಾಧ್ಯಕ್ಷರಾದ ಸುನಂದಾ, ಮೂಡಿಗೆರೆ ಯೋಜನಾ ಕಚೇರಿಯ ಹಣಕಾಸು ಪ್ರಬಂಧಕರಾದ ಅಣ್ಣುಗೌಡ, ವಲಯ ಮೇಲ್ವಿಚಾರಕ ಚಿತ್ತರಂಜನ್, ಸೇವಾ ಪ್ರತಿನಿಧಿಗಳಾದ ಕಾವ್ಯ, ಸೌಂದರ್ಯ, ಕೃಷಿಯಂತ್ರ ಧಾರೆಯ ಲಕ್ಷ್ಮಿ ಹಾಗೂ ಗ್ರಾಮಸ್ಥರು ಇದ್ದರು.