ಮೂಡಿಗೆರೆ : ಜೂನ್ 13 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡಿಗೆರೆ ಶಾಖೆಯ ಚುನಾವಣೆ ನಡೆಯಲಿದ್ದು ಈಗಾಗಲೇ ಅಭ್ಯರ್ಥಿಗಳು ಮತಯಾಚನೆಯಲ್ಲಿ ತೊಡಗಿದ್ದು ಕೆಲವೆಡೆ ಹಣ ಹಾಗೂ ಹೆಂಡದ ಪಾರ್ಟಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅರೋಪಗಳು ಕೇಳಿ ಬರುತ್ತಿವೆ.
ಶಿಕ್ಷಕರು ಎಂದರೇ ಸಮಾಜದಲ್ಲಿ ಅತ್ಯುತ್ತಮವಾದ ಗೌರವದ ಸ್ಥಾನಮಾನವಿದ್ದು ಎಲ್ಲರಿಗೂ ಮಾದರಿಯಾಗಬೇಕಿದ್ದ ಶಿಕ್ಷಕರೇ ಹಣ ಹೆಂಡಕ್ಕೆ ತಮ್ಮ ಮತವನ್ನು ಮಾರಿಕೊಳ್ಳುತ್ತಿರುವುದು ಮತ್ತು ಶಿಕ್ಷಕರ ಕ್ಷೇತ್ರದಿಂದ ಸ್ಪರ್ದಿಸಿರುವ ಕೆಲ ಅಭ್ಯರ್ಥಿಗಳು ಹಣ ಮತ್ತು ಹೆಂಡದ ಆಮಿಷ ಒಡ್ಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಮೂಡಿಗೆರೆಯ ಕೆಲ ಬಾರ್ ಹಾಗೂ ರೆಸಾರ್ಟ್‍ಗಳಲ್ಲಿ ಸಂಜೆ ವೇಳೆಯಲ್ಲಿ ಕೆಲ ಶಿಕ್ಷಕರು ಸೇರಿಕೊಂಡು ಪಾರ್ಟಿ ನಡೆಸುವ ಮೂಲಕ ಮತ ಯಾಚಿಸುತ್ತಿರುವ ಬಗ್ಗೆ ಹೆಸರು ಹೇಳಲು ಇಚ್ಚಿಸಿದ ಶಿಕ್ಷಕರೊಬ್ಬರು ಫಸ್ಟ್ ಸುದ್ದಿಗೆ ತಿಳಿಸಿದ್ದಾರೆ.ಸಮಾಜಕ್ಕೆ ಮಾದರಿಯಾಗಬೇಕಾಗಿದ್ದ ಶಿಕ್ಷಕರೇ ಚುನಾವಣೆಯನ್ನು ಗೆಲುವುದಕ್ಕೆ ಇಂತಹ ಅಡ್ಡದಾರಿ ಹಿಡಿದರೆ ಚುನಾವಣೆಯಲ್ಲಿ ಸ್ಪರ್ದಿಸಿ ಪ್ರಮಾಣಿಕವಾಗಿ ಮತಯಾಚನೆ ಮಾಡುವ ಶಿಕ್ಷಕರನ್ನು ಅನುಮಾನದಿಂದ ನೋಡುವ ವಾತಾವರಣ ನಿರ್ಮಾಣವಾಗಬಹುದಾಗಿದೆ.










