ಮೂಡಿಗೆರೆ : ಸಿನಿಮಾ ಕ್ಷೇತ್ರಕ್ಕೆ ನಟ ಪುನೀತ್ ಕೊಡುಗೆ ಅಪಾರ : ನಾಗೇಶ್.

105
firstsuddi

ಕೊಟ್ಟಿಗೆಹಾರ : ಸಿನಿಮಾ ಕ್ಷೇತ್ರಕ್ಕೆ ನಟ ಪುನೀತ್ ರಾಜ್‍ಕುಮಾರ್ ಅವರ ಕೊಡುಗೆ ಅಪಾರ ಎಂದು ಕೊಟ್ಟಿಗೆಹಾರದ ಪ್ರೆಂಡ್ಸ್ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ನಾಗೇಶ್ ಹೇಳಿದರು.

ಕೊಟ್ಟಿಗೆಹಾರದಲ್ಲಿ ನಿನ್ನೆ ಪ್ರೆಂಡ್ಸ್ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ನಡೆದ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲ್ಯದಿಂದಲೂ ತನ್ನ ನಟನೆಯಿಂದ ಜನಮನ ಸೂರೆಗೊಂಡ ಪುನೀತ್ ಅವರು ತಂದೆಯವರ ಪ್ರಭಾವಲಯದ ನಡುವೆ ಇದ್ದರೂ ಕೂಡ ತಮ್ಮ ನಟನೆಯ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಡಾ. ರಾಜಕುಮಾರ್ ಅವರ ಸರಳತೆ, ವಿನಯವನ್ನು ಮೈಗೂಡಿಸಿಕೊಂಡು ಸ್ಟಾರ್ ನಟನಾದರೂ ಜನಸಾಮಾನ್ಯರೊಂದಿಗೆ ಬೆರೆಯುತ್ತಿದ್ದರು. ತೆರೆಯ ಮೇಲೆ ಮಾತ್ರವಲ್ಲದೇ ತಮ್ಮ ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ತೆರೆಯ ಹಿಂದೆಯೂ ಕೂಡ ನಾಯಕರಾಗಿದ್ದರು ಎಂದರು.

ಈ ಸಂದರ್ಭದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೇಣದಬತ್ತಿ ಬೆಳಗಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಗ್ರಾ.ಪಂ ಮಾಜಿ ಸದಸ್ಯ ಸೋಮೇಶ್, ಸಂಘದ ಗೌರವಾಧ್ಯಕ್ಷರಾದ ವೇಣುಗೋಪಾಲ್ ಪೈ, ಕಾರ್ಯದರ್ಶಿ ರಮೇಶ್, ಮಾಜಿ ಅಧ್ಯಕ್ಷ ದೇವೇಂದ್ರ, ಸದಸ್ಯರಾದ ಪ್ರಸಾದ್, ದೀಪಕ್, ಪೂರ್ಣೆಶ್, ಜಗದೀಶ್, ಗಣೇಶ್, ದಿನೇಶ್, ಶರಣ್, ಮಹೇಂದ್ರ, ದಿಲೀಪ್, ಶಿವಪ್ರಸಾದ್, ಮದನ್, ಸುಲೈಮಾನ್, ವಿಜಯ್ ಶಿಕ್ಷಕ ಭಕ್ತೇಶ್, ಮುಂತಾದವರು ಇದ್ದರು.