ಮೂಡಿಗೆರೆ : ಹಾಲೂರು ಸಮೀಪ ಹೇಮಾವತಿ ನದಿಯಲ್ಲಿ ಕೊಚ್ಚಿಹೋದ ಯುವಕ…

2210
firstsuddi

ಮೂಡಿಗೆರೆ : ಮಳೆಯ ಆರ್ಭಟ ಮುಂದುವರೆದಿದ್ದು, ಹೇಮಾವತಿ ನದಿಯಲ್ಲಿ ಯುವಕ ಕೊಚ್ಚಿಹೋದ ಘಟನೆ ತಾಲ್ಲೂಕಿನ ಹಾಲೂರಿನಲ್ಲಿ ನಡೆದಿದೆ. ಶ್ರೀವತ್ಸ(22) ಕೊಚ್ಚಿಹೋದ ಯುವಕ ಎನ್ನಲಾಗಿದ್ದು, ನಾಲ್ಕು ದಿನಗಳ ಹಿಂದೆ ಹೇಮಾವತಿ ನದಿ ಪಕ್ಕ ಜಮೀನಿನಲ್ಲಿ ಟ್ರಿಲ್ಲರ್ ನ್ನು ಬಿಟ್ಟು ಬಂದಿದ್ದು, ಇಂದು ಅದನ್ನು ನೋಡಲು ತೆರಳಿದ ಯುವಕ ನೀರಿನ ತೀವ್ರತೆಯನ್ನು ಅರಿಯದೇ ನೋಡು ನೋಡುತ್ತಿದ್ದಂತೆ ಕೊಚ್ಚಿಹೋಗಿದ್ದು, ಉಕ್ಕಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ಯುವಕನ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದ್ದು, ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.