ಮೂಡಿಗೆರೆ:- ಕೆಲವು ದಿನಗಳ ಹಿಂದೆ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೂರು ಕೂಡಿಗೆ ಬಳಿ ಗದ್ದೆಗೆ ಇಳಿದಿದ್ದ ಶ್ರೀಹರ್ಷ22 ಎಂಬ ಯುವಕನು ರಭಸವಾಗಿ ಸುರಿಯತ್ತಿದ್ದ ಮಳೆಯ ಕಾರಣ ಏಕಾ ಏಕಿ ರಭಸದಿಂದ ಬಂದ ಹೇಮಾವತಿ ನದಿಯ ನೀರಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಯವಕನ ಕುಟುಂಬಕ್ಕೆ ಸರ್ಕಾರದಿಂದ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಪರಿಹಾರದ ಚೆಕ್ಕನ್ನು ಇಂದು ವಿತರಿಸಲಾಯಿತು.
ಶಾಸಕರಾದ ಎಂ.ಪಿ.ಕುಮಾರಸ್ವಾಮಿಯವರು ಪರಿಹಾರ ಧನದ ಚೆಕ್ಕನ್ನು ಮೃತರ ತಾಯಿಯಾದ ಶ್ರೀಮತಿ ಗಾಯಿತ್ರಿ ಪ್ರಸಾದ್ ಅವರಿಗೆ 4 ಲಕ್ಷ ರೂ ಮೊತ್ತದ ಪರಿಹಾರದ ಚೆಕ್ಕನ್ನು ವಿತರಿಸಿ ಇನ್ನು ಒಂದು ಲಕ್ಷ ಬಾಕಿ ಪರಿಹಾರದ ಹಣವನ್ನು ಆದಷ್ಟು ಬೇಗ ಕೊಡಲಾಗುವುದು ಎಂದು ಕುಟುಂಬಕ್ಕೆ ಭರವಸೆಯನ್ನು ನೀಡಿದರು ಈ ಸಂದರ್ಭದಲ್ಲಿ ಸ್ಥಳದಲ್ಲಿ ಕಸಬಾ ರಾಜಸ್ವ ನಿರೀಕ್ಷಕರಾದ ಗಿಲ್ಬರ್ಟ್ಪಾಯಿಸ್, ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀದರ್, ಮಿಥುನ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಪಂಚಾಕ್ಷರಿ ಹಾಗೂ ಗ್ರಾಮದ ಮುಖಂಡರು ಮುಂತಾದವರಿದ್ದರು.










