ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ – ಇಬ್ಬರು ಮಕ್ಕಳು ಪಾರು…

92
firstsuddi

ಗದಗ : ತನ್ನ ಮೂವರು ಮಕ್ಕಳೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ತಾಯಿ ಹಾಗೂ 8 ವರ್ಷದ ಮಗಳು ಮೃತಪಟ್ಟಿದ್ದು, ಇನ್ನಿಬ್ಬರು ಮಕ್ಕಳು ಬಚಾವ್ ಆಗಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ.

ಇಂದು ನಸುಕಿನ ಜಾವ ಮೂವರು ಮಕ್ಕಳೊಂದಿಗೆ ಹೋಗಿ ತಾಯಿ ನದಿಗೆ ಹಾರಿದ್ದಾರೆ. ಘಟನೆಯಲ್ಲಿ ಉಮಾದೇವಿ ಮತ್ತು 8 ವರ್ಷದ ಮಗಳು ಮೃತಪಟ್ಟರೆ 12 ಮತ್ತು 14 ವರ್ಷದ ಮತ್ತಿಬ್ಬರು ತಾಯಿಯಿಂದ ತಪ್ಪಿಸಿಕೊಂಡು ಓಡಿಬಂದ್ದಾರೆ.

ಮೂರು ತಿಂಗಳ ಹಿಂದೆ ಉಮಾದೇವಿ ಪತಿ ಸಂಗಮೇಶ ಚಲ್ಲಿಕೇರಿ ಕೋವಿಡ್ನಿಂದ ಸಾವನ್ನಪ್ಪಿದ್ದರು. ದಂಪತಿಗೆ ನಾಲ್ವರು ಹೆಣ್ಣುಮಕ್ಕಳಿದ್ದು, ಮೊದಲ ಮಗಳು ಗದಗದ ಕಾಲೇಜೊಂದರಲ್ಲಿ ಓದುತ್ತಿದ್ದಾಳೆ. ಪತಿ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ತಾಯಿ, ಮಗುವಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.