ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ನಿಂದ ಗುಡ್ ನ್ಯೂಸ್…

52
firstsuddi

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮವು ಗುಡ್ ನ್ಯೂಸ್ ವೊಂದನ್ನು ನೀಡಿದೆ. ಮೆಜೆಸ್ಟಿಕ್ ನಿಂದ ವೈಟ್ ಫಿಲ್ಡ್ ನಡುವಿನ ಜನ ದಟ್ಟನೆಯನ್ನು ನಿಯಂತ್ರಿಸುವ ಸಲುವಾಗಿ ನಮ್ಮ ಮೆಟ್ರೋ ಈ ಭಾಗದಲ್ಲಿ 3 ನಿಮಿಷಕ್ಕೊಮ್ಮೆ ಮೆಟ್ರೋ ಸೇವೆ ಒದಗಿಸಲು ಬಿಎಂಆರ್ ಸಿಎಲ್ ಮುಂದಾಗಿದೆ.

ಮೆಜೆಸ್ಟಿಕ್ ನಿಂದ ಗರಡುಚಾರ್ ಪಾಳ್ಯ ಸ್ಟೇಷನ್ ಗಳ ನಡುವೆ ಪೀಕ್ ಅವರ್ ನಲ್ಲಿ ಹೆಚ್ಚು ರೈಲು ಓಡಾಟ ನಡೆಸಲು ಚಿಂತನೆ ನಡೆಸಿದೆ. ಈ ಮಾರ್ಗಗಳಲ್ಲಿ ಬೆಳಗ್ಗೆ 8.45 ರಿಂದ ಬೆಳಗ್ಗೆ 10.20 ರವೆಗೆ ಪ್ರತಿ 3 ನಿಮಿಷಕ್ಕೊಂದು ರೈಲು ಸಂಚಾರ ಮಾಡುವುದಾಗಿ ತಿಳಿಸಿದೆ.

ಟ್ರಿನಿಟಿ, ಇಂದಿರಾನಗರ, ಕೆ ಆರ್ ಪುರಂ, ಬೆನ್ನಿಗನಹಳ್ಳಿ ಪ್ರಯಾಣಿಕರ ಅವಶ್ಯಕತೆಗಳನ್ನ ಪೂರೈಸಲು ಬಿಎಂಆರ್ ಸಿಎಲ್ ಪ್ಲ್ಯಾನ್ ಮಾಡಿದ್ದು, ಇದೇ ಸೋಮವಾರದಿಂದ ಬೆಳಗ್ಗಿನ ದಟ್ಟಣೆಯ ಸಮಯದಲ್ಲಿ ಹೆಚ್ಚುವರಿ ಮೆಟ್ರೋ ಸೇವೆ ಆರಂಭವಾಗಲಿದೆ.

ಇದೇ ವೇಳೆ ಇಂಟರ್‌ಸಿಟಿ ಬಸ್‌ಗಳ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಿಗ್ಗೆ 5 ಗಂಟೆಯಿಂದ ರೈಲು ಸೇವೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಎಲ್ಲಾ ದಿಕ್ಕುಗಳಿಗೆ ಮೊದಲ ರೈಲಿನ ಸೇವೆ 5 ಗಂಟೆಗೆ ಆರಂಭವಾಗಲಿದ್ದು, ಭಾನುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ, 5.00 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ.