ಮೈಸೂರು : ಸಿಡಿಮದ್ದು ಸ್ಫೋಟಗೊಂಡು ಸಾಕುನಾಯಿಯ ಮುಖ ಛಿದ್ರ…

72
firstsuddi

ಮೈಸೂರು : ಸಿಡಿಮದ್ದು ಸ್ಫೋಟಗೊಂಡು ಸಾಕು ನಾಯಿ ಛಿದ್ರ ಛಿದ್ರವಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಕಪ್ಪಸೋಗೆಯ ಗ್ರಾಮದಲ್ಲಿ ನಡೆದಿದೆ.

ಕಾಡು ಪ್ರಾಣಿಗಳ ಬೇಟೆಗೆ ಅಕ್ರಮವಾಗಿ ಇರಿಸಿದ್ದ ಸಿಡಿಮದ್ದು ಸ್ಫೋಟವಾಗಿದೆ. ಸ್ಫೋಟಕ್ಕೆ ಕಪ್ಪಸೋಗೆ ಗ್ರಾಮದ ಮಹೇಶ್ ಎಂಬುವರಿಗೆ ಸೇರಿದ್ದ ಸಾಕು ನಾಯಿಯ ಮುಖ ಛಿಧ್ರವಾಗಿದೆ.

ಮಹೇಶ್ ತಂದೆ ಸಿದ್ದಮಲ್ಲಯ್ಯ ಎಂಬುವವರು ಜಾನುವಾರುಗಳ ಜೊತೆ ಮಾದನಹಳ್ಳಿ ಗುಡ್ಡಕ್ಕೆ ತೆರಳಿದ್ದರು. ಈ ವೇಳೆ ಸ್ಪೋಟ ಸಂಭವಿಸಿ ನಾಯಿ ಮೃತಪಟ್ಟಿದೆ. ಸದ್ಯ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.