ಮೊದಲ ಬಾರಿಗೆ ಅಪ್ಪ-ಅಮ್ಮನನ್ನು ಫ್ಲೈಟ್ ನಲ್ಲಿ ಕರೆದೊಯ್ದ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ.

127
firstsuddi

ನವದೆಹಲಿ : ಟೋಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ತಮ್ಮ ‘ಚಿಕ್ಕ ಕನಸೊಂದನ್ನು’ ನನಸಾಗಿಸಿಕೊಂಡಿದ್ದಾರೆ.

ಹೌದು, ನೀರಜ್ ಚೋಪ್ರಾ ಇದೇ ಮೊದಲ ಬಾರಿಗೆ ತನ್ನ ತಂದೆ-ತಾಯಿಯನ್ನು ವಿಮಾನದಲ್ಲಿ ಕರೆದೊಯ್ಯಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ನನ್ನ ತಂದೆ, ತಾಯಿಯನ್ನು ವಿಮಾನದಲ್ಲಿ ಕರೆದೊಯ್ಯುವ ಸಣ್ಣ ಕನಸು ಇಂದು ನನಸಾಗಿದೆ’ ಎಂದು ಬರೆದುಕೊಂಡು ಅಪ್ಪ- ಅಮ್ಮನ ಜೊತೆ ವಿಮಾನದಲ್ಲಿರುವ ಮತ್ತು ವಿಮಾನದ ಹೊರಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನೀರಜ್ ಚೋಪ್ರಾ ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.