ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ – ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ…

78
firstsuddi

ಬೆಂಗಳೂರು : ಮೊಮ್ಮಗಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ ಆಕೆಯ 70 ವರ್ಷದ ತಾತನಿಗೆ ಪೋಕ್ಸೋ ಕಾಯ್ದೆಯಡಿಯಲ್ಲಿ 20 ವರ್ಷ ಸೆರೆವಾಸ, 1 ಲಕ್ಷ 30 ಸಾವಿರ ದಂಡವನ್ನ ವಿಧಿಸಿ ಬೆಂಗಳೂರಿನ ಫಾಸ್ಟ್ ಟ್ಯ್ರಾಕ್ ಸೆಷನ್ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.

ನಗರದ ಕುಮಾರಸ್ವಾಮಿ ಲೇಔಟ್ ನಿವಾಸಿ ರಮೇಶ್ ಎಂಬ ವೃದ್ಧ, ತನ್ನ ಮೊಮ್ಮಗಳ ಮೇಲೆ 3ನೇ ತರಗತಿಯಿಂದ 8ನೇ ತರಗತಿವರೆಗೂ ಅಶ್ಲೀಲ ವಿಡಿಯೋ ತೋರಿಸಿ, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೆದರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರಂತೆ. ಯಾರಿಗಾದರೂ ಹೇಳಿದ್ರೆ ನಿಮ್ಮ ತಂದೆಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದರಂತೆ.

ಸತತ ಐದು ವರ್ಷಗಳ ಕಾಲ ಬಾಲಕಿ ತನ್ನ ಮೇಲೆ ನಡೆದಿದ್ದ ದೌರ್ಜನ್ಯ ಸಹಿಸಿಕೊಂಡಿದ್ದಳು. ಬಳಿಕ 2020ರಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿ ಕೊನೆಗೂ ತನ್ನ ಪೋಷಕರಿಗೆ ಕೃತ್ಯದ ಕುರಿತು ತಿಳಿಸಿದ್ದಳು. ಬಳಿಕ ಆಕೆಯ ಪೋಷಕರು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ವೃದ್ಧನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.