ದಾವಣಗೆರೆ : ಯತ್ನಾಳ್‍ನಂತಹ ದುಷ್ಟ ಮನಸ್ಸಿನ ವ್ಯಕ್ತಿಯನ್ನ ನಾನು ನೋಡಿಲ್ಲ. ಕಾಂಗ್ರೆಸ್‍ನವರು ಬಿಜೆಪಿಗೆ ಬಂದರು, ಅವರಿಗೂ ಪ್ರಚೋದನೆ ಮಾಡುತ್ತಿದ್ದಾರೆ. ಕಳೆದ ಏಳು, ಎಂಟು ವರ್ಷಗಳಿಂದ ಯತ್ನಾಳ್‍ಗೆ ಇದೇ ಕೆಲಸ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ನಿನ್ನೆ ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಹೀಗೆಯೇ ಮಾತನಾಡಿ ಭಾರತೀಯ ಜನತಾ ಪಾರ್ಟಿಯಿಂದ ಉಚ್ಛಾಟನೆ ಆಗಿದ್ದರು. ಆದ್ರೆ ಯಡಿಯೂರಪ್ಪನವರು ಹೋಗಲಿ ಅಂತ ಕರೆತಂದಿದ್ದರು. ಈ ಮನುಷ್ಯ ಯಡಿಯೂರಪ್ಪನವರು ಕಾಲಿಡಿದು ಒಳಗೆ ಬಂದರು. ಯತ್ನಾಳ್ ಗೋಮುಖ ವ್ಯಾಘ್ರ ಅಂತ ಯಡಿಯೂರಪ್ಪನವರಿಗೆ ಗೊತ್ತಾಗಲಿಲ್ಲ. ಯಡಿಯೂರಪ್ಪ ಬೆಳ್ಳಗಿರುವುದೆಲ್ಲ ಹಾಲು ಅಂತ ನಂಬುತ್ತಾರೆ. ಅಷ್ಟು ಪರಿಶುದ್ಧವಾದ ರಾಜಕಾರಣಿ ಯಡಿಯೂರಪ್ಪನವರು. ಅಂತವರಿಗೆ ದ್ರೋಹ ಮಾಡುತ್ತಿದ್ದಿಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸನಗೌಡ ಯತ್ನಾಳ್, ರಮೇಶ್ ಜಾರಕಿಹೊಳಿಗೆ ಬಿಎಸ್‍ವೈ ಕುರಿತು ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಜಾರಕಿಹೊಳಿಗೆ ಬಿ.ವೈ ವಿಜಯೇಂದ್ರ ಯಾವುದೇ ಧಮ್ಕಿ ಹಾಕಿಲ್ಲ, ಶಾಸಕ ರಮೇಶ್ ಜಾರಕಿಹೊಳಿ ಮಾತಿನಿಂದ ಬಿಎಸ್‍ವೈಗೆ ನೋವಾಗಿದ್ದನ್ನು ಅವರ ಅಭಿಮಾನಿಗಳು ಸಹಿಸಲ್ಲ ಎಂದು ಹೇಳಿದ್ದಾರೆ.










