ಯಾರಿಗೆ ನಾಲಿಗೆ ಮೇಲೆ ಹಿಡಿತ ಇರುತ್ತದೆಯೋ ಅವರು ಈ ರೀತಿ ಮಾತನಾಡಲ್ಲ : ಜಮೀರ್ ಗೆ ಪ್ರಿಯಾಂಕ್ ಖರ್ಗೆ ಟಾಂಗ್…

94
firstsuddi

ಕಲಬುರಗಿ : ಮುಂದಿನ ಸಿಎಂ ವಿಚಾರವಾಗಿ ನಮ್ಮ ಪಕ್ಷದ ಶಾಸಕ ಜಮೀರ್ ಅಹ್ಮದ್ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಪಕ್ಷ ಕಟ್ಟುವ ಸಾಮರ್ಥ್ಯ, ಜವಾಬ್ದಾರಿ ಇರುವ ನಾಯಕ ಈ ರೀತಿ ಮಾತನಾಡೋದಿಲ್ಲ. ಜಮೀರ್ ಅಹ್ಮದ್ ಖಾನ್ ಜವಾಬ್ದಾರಿ ಇರುವ ನಾಯಕರು ಹಾಗೂ ಯಾರಿಗೆ ನಾಲಿಗೆ ಮೇಲೆ ಹಿಡಿತ ಇರುತ್ತದೆಯೋ ಅವರು ಈ ರೀತಿ ಮಾತನಾಡೋದಿಲ್ಲ. ಇದರಿಂದ ಮುಂದಿನ ಬಾರಿ ಅಧಿಕಾರ ಹಿಡಿಯುವ ಪಕ್ಷದ ಗುರಿಗೆ ಹಿನ್ನಡೆಯಾಗುತ್ತದೆ. ಮಾತನಾಡುವವರು ಇದನ್ನು ಅರಿತುಕೊಂಡು ಮಾತನಾಡಬೇಕು ಎಂದು ಸ್ವಪಕ್ಷದ ಶಾಸಕ ಜಮೀರ್ ಅವರಿಗೆ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಸಿಎಂ ವಿಚಾರವಾಗಿ ನಮ್ಮ ಪಕ್ಷದಲ್ಲಿ ವಿಭಿನ್ನ ಅಭಿಪ್ರಾಯ ಕೇಳಿಬರುತ್ತಿದೆ. ನಮ್ಮಲ್ಲಿ ಸಿಎಂ ಅರ್ಹತೆ ಇರುವವರು ಬಹಳ ಜನ ಇರುವುದರಿಂದ ಈ ಮಾತು ಕೇಳಿ ಬರುತ್ತಿದೆ. ಆದರೆ ಬಿಜೆಪಿಯವರಿಗೆ ಯಡಿಯೂರಪ್ಪ ಬಿಟ್ರೆ ಗತಿ ಇಲ್ಲ. ಯಾರು ಅನಗತ್ಯವಾಗಿ, ಬಹಿರಂಗವಾಗಿ ಈ ವಿಚಾರ ಚರ್ಚೆ ಮಾಡದಂತೆ ಈಗಾಗಲೇ ನಮ್ಮ ಪಕ್ಷದಲ್ಲಿ ಸೂಚನೆ ಹೊರಡಿಸಲಾಗಿದೆ. ಆದರೂ ಕೂಡ ಈ ವಿಚಾರವಾಗಿ ಮಾತನಾಡಿದವರ ವಿರುದ್ಧ ಶಿಸ್ತು ಸಮಿತಿ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದರು.