ಯುವಜನತೆ ಸೈಬರ್ ಕ್ರೈಮ್ ಬಗ್ಗೆ ಎಚ್ಚರಿಕೆಯಿಂದಿರಬೇಕು : ನಾಸೀರ್ ಹುಸೇನ್.

67
firstsuddi

ಚಿಕ್ಕಮಗಳೂರು : ವಿದ್ಯಾರ್ಥಿಗಳು ವಿಶೇಷವಾಗಿ ಯುವಜನತೆ ಸೈಬರ್ ಕ್ರೈಮ್ ಬಗ್ಗೆ ಸದಾ ಎಚ್ಚರಿಕೆಯಿಂದಿರಬೇಕು ಎಂದು ಸೈಬರ್ ಕ್ರೈಮ್ ಠಾಣಾಧಿಕಾರಿ ನಾಸೀರ್ ಹುಸೇನ್ ಸಲಹೆ ನೀಡಿದರು.

ನಗರದ ಕುವೆಂಪು ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ಇಂದು ನಡೆದ ಸೈಬರ್ ಕ್ರೈಮ್ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಮಾಹಿತಿ ತಂತ್ರಜ್ಞಾನ ಅವಲಂಬಿತ ಜಗತ್ತಿಗೆ ಸೈಬರ್ ಕ್ರೈಮ್ ದೊಡ್ಡ ಸವಾಲಾಗಿದೆ, ಸೈಬರ್ ಬುಲ್ಲಿಂಗ್, ಸೈಬರ್ ಹ್ಯಾಕಿಂಗ್, ಆನ್‍ಲೈನ್ ಫ್ರಾಡ್ ಸಮಸ್ಯೆಗಳು ದೊಡ್ಡ ತಲೆನೋವಾಗಿ ಪರಿಣಮಿಸಿವೆ ಎಂದರು.

ನಾವು ಯಾವುದೇ ಆಮಿಷಕ್ಕೆ ಒಳಗಾಗದೇ ಜಾಗೃತರಾಗಿದ್ದರೆ ಮಾತ್ರ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದ ಅವರು ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನತೆ ಮೊಬೈಲ್‍ನಿಂದ ಸಾಧ್ಯವಾದಷ್ಟೂ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ.ಶಂಕರ್ ಸೈಬರ್ ಕ್ರೈಂ ವಿರುದ್ದ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ಶಾಲೆಗಳಲ್ಲೂ ಸೈಬರ್ ಕ್ರೈಂ ಅರಿವು ಕಾರ್ಯಾಗಾರಗಳನ್ನು ನಡೆಸಬೇಕು ಎಂದು ಸಲಹೆ ಮಾಡಿದರು.

ವಿವಿಧ ರೀತಿಯ ಸೈಬರ್ ಕ್ರೈಂ ನಡೆಯುವ ಬಗ್ಗೆ ಮತ್ತು ಅವುಗಳನ್ನು ತಡೆಗಟ್ಟುವ ಕುರಿತು ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು, ಸೈಬರ್ ಕ್ರೈಮ್ ಠಾಣೆಯ ಎಸ್.ಐ ನೀತುಗೋಡೆ, ಪ್ರಾಂಶುಪಾಲ ರಾಘವೇಂದ್ರ ಉಪಸ್ಥಿತರಿದ್ದರು.