‘ಯುವರತ್ನ’ ನಟಿ ಸಯ್ಯೇಶಾಗೆ ಹೆಣ್ಣು ಮಗು ಜನನ…

131

ಚೆನ್ನೈ : ‘ಯುವರತ್ನ’ ನಾಯಕಿ ಸಯ್ಯೇಶಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಸಯ್ಯೇಶಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಕುರಿತು ನಟ ವಿಶಾಲ್ ಅವರು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಆರ್ಯ ಹಾಗೂ ಸಯ್ಯೇಶಾ ದಂಪತಿಗೆ ಸೆಲೆಬ್ರಿಟಿಗಳು, ಸ್ನೇಹಿತರು ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

2019ರ ಮಾರ್ಚ್ ನಲ್ಲಿ ಆರ್ಯ ಹಾಗೂ ಸಯ್ಯೇಶಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹೈದರಾಬಾದ್ ನ ತಾಜ್ ಫುಕ್ನಮ್ ಪ್ಯಾಲೇಸ್ ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿತ್ತು.

2015ರಲ್ಲಿ ತೆಲುಗಿನ ‘ಅಖಿಲ್’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಾಯ್ಯೇಶಾ ಅವರು ತಮಿಳು, ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಟಿಸಿದ್ದಾರೆ.