ರಸ್ತೆ ಅಪಘಾತದಲ್ಲಿ ಹಿನ್ನೆಲೆ ಗಾಯಕಿ ಸಾವು…

181
firstsuddi

ಮುಂಬೈ : ರಸ್ತೆ ಅಪಘಾತದಲ್ಲಿ ಮರಾಠಿ ಚಿತ್ರಗಳ ಹಿನ್ನೆಲೆ ಗಾಯಕಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಗೀತಾ ಮಾಲಿ ಮೃತಪಟ್ಟ ಗಾಯಕಿ ಎಂದು ಗುರುತಿಸಲಾಗಿದ್ದು, ಗೀತಾ ಅವರು ಕಾರಿನಲ್ಲಿ ನಿನ್ನೆ ಅಮೆರಿಕದಿಂದ ನಾಸಿಕ್‍ನಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಂಟೇನರ್‍ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಅಪಘಾತದಲ್ಲಿ ಗೀತಾ ಹಾಗೂ ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಶಾಹಾಪುರ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗೀತಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.