ರಸ್ತೆ ನಿರ್ಮಾಣ ಕಾಮಗಾರಿಯ ಸಾಮಾಗ್ರಿ ಕಳವು ಬಾಳೂರು ಪೋಲಿಸರಿಂದ ಆರೋಪಿ ಬಂಧನ.

70

ಕೊಟ್ಟಿಗೆಹಾರ:ರಸ್ತೆ ನಿರ್ಮಾಣ ಕಾಮಗಾರಿಯ ಸಾಮಾಗ್ರಿಗಳನ್ನು ಕಳವು ಮಾಡಿದ ಆರೋಪಿಯನ್ನು ಬಾಳೂರು ಪೊಲೀಸರು ಬಂಧಿಸಿ ಸಾಮಾಗ್ರಿಯನ್ನು ವಶ ಪಡಿಸಿಕೊಂಡಿದ್ದಾರೆ.

ಸಂಪ್ಲಿ ಗ್ರಾಮದಿಂದ ಜಿ ಹೊಸಹಳ್ಳಿ ಗ್ರಾಮದವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗೆ ತಂದಿದ್ದ ಗುತ್ತಿಗೆದಾರರಾದ ಕೃಷ್ಣೆಗೌಡ ಎಂಬುವವರಿಗೆ ಸೇರಿದ ರಸ್ತೆ ಕಾಂಕ್ರೆಟ್ ಕಾಮಗಾರಿಗೆ ಬಳಸುತ್ತಿದ್ದ ಸುಮಾರು ಒಂದೂವರೆ ಲಕ್ಷ ಮೌಲ್ಯದ ಕಬ್ಬಿಣದ ಶೀಟ್‍ಗಳು, ರಾಡ್‍ಗಳು, ವೈಬ್ರೆಟರ್ ಮಿಷನ್ ಸೇರಿದಂತೆ ಹಲವು ವಸ್ತುಗಳು ಕೆಲದಿನಗಳ ಹಿಂದ ಕಳುವಾಗಿದ್ದು ಈ ಬಗ್ಗೆ ಗುತ್ತಿಗೆದಾರರಾದ ಕೃಷ್ಣೆಗೌಡ ಅವರು ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಹೊಸದುರ್ಗ ತಾಲ್ಲೂಕಿನ ಯಲ್ಲಭೋವಿ ಹಟ್ಟಿ ಗ್ರಾಮದ ಕೃಷ್ಣಮೂರ್ತಿ ಎಂಬುವವನನ್ನು ಬಂಧಿಸಿ ಆರೋಪಿಯಿಂದ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

 ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಸೋಮೇಗೌಡ,  ಪಿಎಸ್‍ಐ ದಿಲೀಪ್‍ಕುಮಾರ್, ಸಿಬ್ಬಂದಿಗಳಾದ ಶಂಕರ್ ಕೆ.ಜೆ, ಮಹೇಶ್ ಬೂದಿಹಾಳು, ಸತೀಶ್ ಇದ್ದರು.