ರೋಪ್‌ವೇ ದುರಂತ : 3 ಸಾವು, 40ಕ್ಕೂ ಹೆಚ್ಚು ಜನರ ರಕ್ಷಣೆ…

78
fistsuddi

ರಾಂಚಿ : ಜಾರ್ಖಂಡ್ ನ ದಿಯೋಘರ್ ಜಿಲ್ಲೆಯ ತ್ರಿಕೂಟ ಪರ್ವತ ರೋಪ್‌ವೇ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ರಾಮನವಮಿ ದಿನದಂದು ದಿಯೋಘರ್ ನ ತ್ರಿಕೂಟ ಪರ್ವತವನ್ನು ವೀಕ್ಷಿಸಲು ಹೆಚ್ಚಿನ ಜನರು ಬಂದಿದ್ದರು. ಈ ವೇಳೆ ತ್ರಿಕೂಟ್ ಪರ್ವತದ ಮೇಲಿನ ರೋಪ್ ವೇಯ ಆಕ್ಸಲ್ ಮುರಿದುಹೋಗಿ, ಎರಡು ಕಾರುಗಳು ಒಂದಕ್ಕೊಂದು ಡಿಕ್ಕಿಯಾಗಿ ಈ ದುರಂತ ಸಂಭವಿಸಿತ್ತು. ಸುಮಾರು 40 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿರುವ ಭಾರತೀಯ ವಾಯುಪಡೆ 40ಕ್ಕೂ ಅಧಿಕ ಜನರ ಪ್ರಾಣ ರಕ್ಷಿಸಿದೆ. ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ.