ವಾಹ್! ನಿನಗೆ ಹಿಂದಿ ಚೆನ್ನಾಗಿ ತಿಳಿದಿದೆಯೇ? : ಜಪಾನಿ ಬಾಲಕನ ಮಾತು ಕೇಳಿ ಸಂತಸಗೊಂಡ ಪ್ರಧಾನಿ.

66
firstsuddi

ಟೋಕಿಯೋ : ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಕಾಲ ಜಪಾನ್ ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದು ಬೆಳಗ್ಗೆ ಟೋಕಿಯೋದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಜಪಾನಿನ ಮಕ್ಕಳೊಂದಿಗೆ ಅವರ ಸಂಭಾಷಣೆ ಎಲ್ಲರ ಗಮನ ಸೆಳೆಯಿತು.

ಜಪಾನಿ ಬಾಲಕನೊಬ್ಬ ಭಾರತದ ತ್ರಿವರ್ಣ ಧ್ವಜದ ಪ್ಲಕಾರ್ಡ್ ಹಿಡಿದು, ಮೋದಿ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ. ‘ಜಪಾನ್ ಗೆ ಸ್ವಾಗತ, ದಯವಿಟ್ಟು ನಿಮ್ಮ ಆಟೋಗ್ರಾಫ್ ಕೊಡಬಹುದೇ? ಎಂದು ಕೇಳಿದ. ಅವನ ಮಾತು ಕೇಳಿದ ಪ್ರಧಾನಿ, ವಾಹ್! ನೀನು ಹಿಂದಿ ಎಲ್ಲಿಂದ ಕಲಿತೆ?. ನಿನಗೆ ಹಿಂದಿ ಚೆನ್ನಾಗಿ ತಿಳಿದಿದೆಯೇ?’ ಎಂದು ಪ್ರಶ್ನಿಸಿದರು. ‘ನನಗೆ ಹೆಚ್ಚು ಹಿಂದಿ ಮಾತನಾಡಲು ಬರುವುದಿಲ್ಲ, ಆದರೆ ಅರ್ಥವಾಗುತ್ತೆ ಎಂದ. ಬಾಲಕನ ಮಾತು ಕೇಳಿ ಪ್ರಧಾನಿ ಸಂತಸಗೊಂಡರು.

ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನ ಜಪಾನ್ ಪ್ರವಾಸ ಕೈಗೊಂಡಿದ್ದು, ಅವರು ಅಲ್ಲಿ ಕ್ವಾಡ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.