ವಿಜಯಪುರ : ಅಣ್ಣನನ್ನೇ ಕೊಲೆಗೈದ ತಮ್ಮ…

136
firstsuddi

ವಿಜಯಪುರ : ಚಾಕುವಿನಿಂದ ಇರಿದು ತನ್ನ ಅಣ್ಣನನ್ನೇ ಕೊಲೆಗೈದಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಣೂರು ತಾಂಡಾದಲ್ಲಿ ನಡೆದಿದೆ. ಅರ್ಜುನ ರಾಠೋಡ(38) ಮೃತಪಟ್ಟ ವ್ಯಕ್ತಿ. ಹಣಮಂತ ರಾಠೋಡ ಕೊಲೆ ಮಾಡಿದ ವ್ಯಕ್ತಿ. ಕುಡಿದು ಮತ್ತಿನಲ್ಲಿ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಕುಡಿದ ಮತ್ತಿನಲ್ಲಿ ತಂದೆಯ ಜೊತೆ ಹಣಮಂತ ಗಲಾಟೆ ಮಾಡುತ್ತಿದ್ದ. ಈ ವೇಳೆ ಜಗಳ ಬಿಡಿಸಲು ಹೋದ ಅರ್ಜುನ್ ರಾಠೋಡ ಹಾಗೂ ಇನ್ನೊಬ್ಬ ಸಹೋದರ ನಾಮದೇವ ಶಂಕರ ರಾಠೋಡ (35) ಮೇಲೆ ಹಣಮಂತ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಅರ್ಜುನ್ ಮೃತಪಟ್ಟರೆ, ನಾಮದೇವ ಶಂಕರ ರಾಠೋಡನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.