ವಿಜಯ್ ದೇವರಕೊಂಡಗೆ ಜೊತೆಯಾದ ಶ್ರೀಲೀಲಾ.

64
firstsuddi

ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಶ್ರೀಲೀಲಾ ಅವರು ಈಗಾಗಲೇ ಜನಪ್ರಿಯತೆ ಪಡೆದಿದ್ದಾರೆ. ಈಗ ಅವರ ಹೊಸ ಸಿನಿಮಾ ಸೆಟ್ಟೇರಿದೆ. ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲು ಶ್ರೀಲೀಲಾ ಸಜ್ಜಾಗಿದ್ದಾರೆ.

ವಿಜಯ್ ದೇವರಕೊಂಡ ನಟನೆಯ 12ನೇ ಸಿನಿಮಾದ ಪೂಜೆ ಕಾರ್ಯವನ್ನು ಇಂದು ಹೈದರಾಬಾದ್ ನಲ್ಲಿ ಸರಳವಾಗಿ ಮಾಡಲಾಯಿತು. ವಿಜಯ್, ಶ್ರೀಲೀಲಾ, ನಿರ್ದೇಶಕ ಗೌತಮ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

‘ಲೈಗರ್’ ಸೋಲಿನ ನಂತರ ‘ಜೆರ್ಸಿ’ ನಿರ್ದೇಶಕ ಗೌತಮ್ , ಡ್ಯಾಶಿಂಗ್ ಹೀರೋ ವಿಜಯ್ ದೇವರಕೊಂಡ ಹೊಸ ಸಿನಿಮಾ ಮಾಡುತ್ತಿದ್ದಾರೆ.