ವಿದೇಶದ ಬದಲು ಯಮಲೋಕಕ್ಕೆ ಪಾಸ್‌ಪೋರ್ಟ್ ಕೊಟ್ಟ ಚಿಕ್ಕಮಗಳೂರಿನ ಗುಂಡಿ ರಸ್ತೆ…

1112
firstsuddi

ಚಿಕ್ಕಮಗಳೂರು : ಪಾಸ್‌ಪೋರ್ಟ್ ವೆರಿಫಿಕೇಶನ್‌ಗಾಗಿ ತಂದೆಯ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಬೈಕ್‌ನಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ನಗರದ ದಂಡರಮಕ್ಕಿ ಸಮೀಪ ನಡೆದಿದ್ದು, ಸಿಂದೂಜ(23) ಮೃತ ಯುವತಿ ಎನ್ನಲಾಗಿದ್ದು, ಅಪಘಾತಕ್ಕೆ ಗುಂಡಿ ಬಿದ್ದ ರಸ್ತೆಯೇ ಕಾರಣ ಎನ್ನಲಾಗಿದೆ. ವಿದೇಶಕ್ಕೆ ಹೋಗಲು ಪಾಸ್‌ಪೋರ್ಟ್ ವೆರಿಫಿಕೇಶನ್‌ಗಾಗಿ ತಂದೆ ಮಗಳು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ಗುಂಡಿಗೆ ಬಿದ್ದಿದ್ದು, ತಂದೆ ಮಗಳು ಇಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಸಿಂದೂಜ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಘಟನೆ ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.