ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಇಂದು ಮತ್ತು ನಾಳೆ ಬ್ಯಾಂಕ್ ಮುಷ್ಕರ…

201
firstsuddi

ಬೆಂಗಳೂರು : ದೇಶಾದ್ಯಂತ ಇಂದು ಮತ್ತು ನಾಳೆ ಬ್ಯಾಂಕ್ ಮುಷ್ಕರ ಹಿನ್ನೆಲೆ, ಬ್ಯಾಂಕ್ ವ್ಯವಹಾರ ಸಂಪೂರ್ಣ ಬಂದ್ ಆಗಲಿದೆ. ವಿವಿಧ ಬೇಡಿಕೆಹಳನ್ನು ಆಗ್ರಹಿಸಿ ಇಂದು ಬೆಂಗಳೂರಿನ ಕೆ.ಜಿ ರಸ್ತೆಯ ಸ್ಟೇಟ್ ಬ್ಯಾಂಕ್ ಆವರಣದಲ್ಲಿ ವಿವಿಧ ಬ್ಯಾಂಕ್ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಈಗಾಗಲೇ ಸ್ಟೇಟ್ ಬ್ಯಾಂಕ್ ಆವರಣದಲ್ಲಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಬ್ಯಾಂಕ್ ನೌಕರರ ಮುಷ್ಕರ ಹಿನ್ನೆಲೆ, ಎಟಿಎಂ, ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್‍ಗಳಿಗೆ ಯಾವುದೇ ಸಮಸ್ಯೆಗಳಿಲ್ಲ.

ಬೇಡಿಕೆಗಳು :

• ವಾರಕ್ಕೆ 5ದಿನಕ್ಕೆ ಮಾತ್ರ ಬ್ಯಾಂಕ್ ಸೇವೆ.
• ಶೇ.20 ರಷ್ಟು ವೇತನವನ್ನು ಹೆಚ್ಚಿಸಬೇಕು.
• ವೇತನದ ಜೊತೆಯಲ್ಲಿ ವಿಶೇಷ ಭತ್ಯೆ ನೀಡಬೇಕು.
• ಕುಟುಂಬ ಪಿಂಚಣಿ ಹೆಚ್ಚಳ ಮಾಡಬೇಕು.
• ಕೆಲಸ ಮತ್ತು ಭೋಜನಕ್ಕೆ ನಿರ್ದಿಷ್ಟ ಸಮಯ ಮೀಸಲಿಡಬೇಕು.
• ವ್ಯವಹಾರದಲ್ಲಿ ಬರುವಂತಹ ಲಾಭದ ಹಣವನ್ನು ನೌಕರರ ಕಲ್ಯಾಣ ನಿಧಿಗೆ ಮೀಸಲಿಡಬೇಕು.
• ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು.
• ನಿವೃತ್ತಿ ಬಳಿಕ ಬಾಕಿ ಇರುವ ರಜೆಗಳಿಗೆ ವೇತನ ನೀಡಬೇಕು.