ಬರ್ಲಿನ್ : ಜರ್ಮನಿಯ ಕ್ಯಾಂಪೇನರ್ ಒಬ್ಬರು 700 ಕುರಿಗಳನ್ನು ಸಿರಿಂಜ್ ಆಕೃತಿಯಲ್ಲಿ ನಿಲ್ಲಿಸಿ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಜನರನ್ನು ಉತ್ತೇಜಿಸಿದ್ದಾರೆ. ಅದರ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜರ್ಮನಿಯಲ್ಲಿ ದಿನನಿತ್ಯ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಹೀಗಿದ್ದರೂ ಜನ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜರ್ಮನಿಯ ಜನ ಕುರಿಗಳನ್ನು ಧನಾತ್ಮಕ ದೃಷ್ಟಿಕೋನದಲ್ಲಿ ನೋಡುತ್ತಾರೆ. ಈ ಹಿನ್ನಲೆಯಲ್ಲಿ ಎಟ್ಜೋಲ್ಡ್ ಎಂಬ ವ್ಯಕ್ತಿ ಜರ್ಮನ್ ಪಟ್ಟಣವಾದ ಷ್ನೆವರ್ಡಿಂಗನ್ ನಲ್ಲಿ ತನ್ನದೇ ತಂಡವನ್ನು ಕಟ್ಟಿಕೊಂಡು ಕುರಿಗಳ ಮೂಲಕ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. 100 ಮೀ ಉದ್ದದ ಸಿರಿಂಜ್ ಆಕೃತಿಯನ್ನು 700 ಕುರಿಗಳ ಮೂಲಕ ನಿರ್ಮಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜರ್ಮನ್ ನಲ್ಲಿ ಶೇ.71.3 ರಷ್ಟು ಜನ ಮಾತ್ರ ಕೊರೊನಾ ಲಸಿಕೆಯ ಎರಡೂ ಡೋಸ್ ನ್ನು ಪಡೆದಿದ್ದಾರೆ. ಎಂದು ಜರ್ಮನ್ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ ಫಾರ್ ಇನ್ಫೆಕ್ಷನ್ ಡಿಸೀಸ್ ಸಂಸ್ಥೆ ವರದಿ ತಿಳಿಸಿದೆ.










